ವೈಶುದೀಪ ಫೌಂಡೇಶನ್ ನೀಡಿದ ಅಂಬ್ಯುಲೆನ್ಸ್ ಮರೆತ ಜಿಲ್ಲಾಡಳಿತ: ಎಚ್ಚರಿಸಿದ ಶಿವಲೀಲಾ ಕುಲಕರ್ಣಿ…!!

ಧಾರವಾಡ: ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ವೈಶುದೀಪ ಫೌಂಡೇಶನ್ ಧಾರವಾಡ ಜಿಲ್ಲೆಯ ವಿವಿಧ ಪ್ರಾಥಮಿಕ ಕೇಂದ್ರಗಳಿಗೆ ನೀಡಿದ್ದ ಅಂಬ್ಯುಲೆನ್ಸಗಳನ್ನ ನಿರ್ಲಕ್ಷ್ಯ ಮಾಡಲಾಗಿದ್ದು, ತಕ್ಷಣವೇ ಅವುಗಳು ಜನರಿಗೆ ಉಪಯೋಗವಾಗುವಂತೆ ನೋಡಿಕೊಳ್ಳಲು ಡಿಎಚ್ಓ ಅವರಿಗೆ ಫೌಂಡೇಶನ್ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಧರ್ಮಪತ್ನಿ ಮನವಿ ಮಾಡಿಕೊಂಡರು.

ಜನರ ಅನುಕೂಲಕ್ಕಾಗಿ ಧಾರವಾಡ ತಾಲೂಕಿನ ಹೆಬ್ಬಳ್ಳಿ, ಉಪ್ಪಿನಬೆಟಗೇರಿ, ಗರಗ, ಅಮ್ಮಿನಬಾವಿ ಹಾಗೂ ಕೋಟೂರ ಗ್ರಾಮಗಳಿಗೆ ಅಂಬ್ಯುಲೆನ್ಸ್ ನೀಡಲಾಗಿತ್ತು. ಆದರೆ, ಅವುಗಳನ್ನ ದುರಸ್ತಿ ಮಾಡದೇ ವಿಮೆ ಕಂತು ಭರಿಸದೇ ಹಾಗೇ ನಿಲ್ಲಿಸಲಾಗಿದೆ. ತಕ್ಷಣ ಅವುಗಳನ್ನ ದುರಸ್ತಿ ಮಾಡಿ, ಜನರಿಗೆ ಉಪಯೋಗವಾಗುವಂತೆ ಮಾಡಲು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಅರವಿಂದ ಏಗನಗೌಡರ, ಜಿಪಂ ಮಾಜಿ ಸದಸ್ಯ ಮಟ್ಟಿ ಸೇರಿದಂತೆ ಹಲವು ಪ್ರಮುಖರು ಈ ಸಮಯದಲ್ಲಿ ಉಪಸ್ಥಿತರಿದ್ದರು.