ಧಾರವಾಡ-71ರಲ್ಲಿ ಸಂಚಲನ ಮೂಡಿಸುತ್ತಿರುವ “ಶಿವಲೀಲಾ ಕುಲಕರ್ಣಿ” ಸ್ವಾತಂತ್ರ್ಯ ನಡಿಗೆ…

ಧಾರವಾಡ: ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ಆರಂಭಿಸಿರುವ ಸ್ವಾತಂತ್ರ್ಯ ನಡಿಗೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುತ್ತಿದೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಿಂದ ಆರಂಭಗೊಂಡಿರುವ ಸ್ವಾತಂತ್ರ್ಯ ನಡಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಹೊಸ ಹುರುಪಿನಿಂದ ಭಾಗವಹಿಸುತ್ತಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿಯವರ ಕಾರ್ಯಗಳನ್ನ ಸ್ಮರಿಸುತ್ತಿದ್ದಾರೆ.