ವಿನಯ ಕುಲಕರ್ಣಿಯವರ ಸ್ಟೇಟ್‌ಸ್ ಹಾಕಿದ್ರ, ಬಿಜೆಪಿಯವರು ಏನು ಮಾಡ್ತಿದ್ದಾರೆ ಗೊತ್ತಾ: ಶಿವಲೀಲಾ ಕುಲಕರ್ಣಿಯವರು ಹೇಳಿದ್ದಾರೆ ನೋಡಿ…

ಕ್ಷೇತ್ರದ ಜನರಿಗಾಗಿ 29 km ಪಾದಯಾತ್ರೆ ನಡೆಸಿದ ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ
ಧಾರವಾಡ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಇಂದು ಧಾರವಾಡ ಗ್ರಾಮೀಣ ಕ್ಷೇತ್ರ 71, ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಕರೆಯ ಮೇರೆಗೆ ಪಾದಯಾತ್ರೆ ನಡೆಸಿದ್ರು.
ಶಿವಲೀಲಾ ಕುಲಕರ್ಣಿ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಉಪ್ಪಿನಬೆಟಗೇರಿ ಗ್ರಾಮದಿಂದ ಆರಂಭವಾಗಿ, ಅಮ್ಮಿನಭಾವಿ ಮೂಲಕ, ಮುರಘಾಮಠದ ಮುಂದೆ ಸಾಗಿ, ಧಾರವಾಡ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನ್ಯಾಯ ಕೇಳುವ ಹಾಗೆ ವಾತಾವರಣ ಇಲ್ಲಾ. ವಿನಾಕಾರಣ ಬಿಜೆಪಿ ಅವರು ಶಾಸಕರ ಸಹಿತ ವಿನಾಕಾರಣ ತೊಂದ್ರೆ ಕೊಡುತ್ತಿದ್ದಾರೆ. ಏನೆ ತೊಂದ್ರೆ ಕೊಟ್ಟರೂ ಸಹಿತ ನಾವೆಲ್ಲಾ ಜನರ ಮುಂದೆ ಹೋಗಿ ಚುನಾವಣೆ ಎದುರಿಸುತ್ತೇವೆ. ಪಾದಯಾತ್ರೆ ಮುಂದಿನ ದಿನಗಳಲ್ಲಿ ಮತ್ತೆ ಮುಂದುವರೆಸುತ್ತೇವೆ ಎಂದು ಮಾಜಿ ಸಚಿವರ ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದರು.