ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮರೆತ ಶಿಕ್ಷಕರ ಸಂಘ: ಇವರೂ.. ಶಿಕ್ಷಕರೇ..!

ಧಾರವಾಡ: ಶಿಕ್ಷಕ ದಿನಾಚರಣೆಯಂದೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನ ಮರೆತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಮತ್ತು ಹುಬ್ಬಳ್ಳಿ ಗ್ರಾಮೀಣ ಘಟಕ. ಪ್ರಚಾರದ ಭರಾಟೆಯಲ್ಲಿ ಮರೆಯಬಾರದವರನ್ನೇ ಮರೆತ ಶಿಕ್ಷಕ ಸಮೂಹ. ಏನಾಗಿದೆ ಎನ್ನೋದನ್ನ ನೀವೇ ಸಂಪೂರ್ಣವಾಗಿ ಓದಿ ತಿಳಿಯಿರಿ.
ಇಂದು ಶಿಕ್ಷಕರ ದಿನಾಚರಣೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ನಿಮಗೆ ತಿಳಿಯದ ವಿಷಯವೇಂದರೇ, ಯಾವ ಮೇಧಾವಿ ವ್ಯಕ್ತಿಯ ಪ್ರಶಸ್ತಿ ತಮಗೆ ಲಭಸಿದರೇ ಜೀವನ ಸಾರ್ಥಕವೆಂದುಕೊಳ್ಳುತ್ತಾರೋ, ಅದೇ ಜೀವವನ್ನ ಮರೆಯುವ ಚಾಳಿಯನ್ನ ಶಿಕ್ಷಕರು ರೂಢಿಸಿಕೊಂಡಿರುವುದು ದುರ್ದೈವದ ಸಂಗತಿ.
ಶಿಕ್ಷಕರ ದಿನಾಚರಣೆಯ ಮುನ್ನಾ ದಿನವೇ ಪೋಸ್ಟರ್ ಹಾಗೂ ಬ್ಯಾನರ್ ಹಾಕಿಕೊಳ್ಳುವುದು ರೂಢಿಸಿಕೊಂಡಿದ್ದಾರೆ. ಅದೇಷ್ಟು ಫಾಸ್ಟ್ ಆಗಿ ಗ್ರೂಫಗಳಿಗೆ ಹೋಗಬೇಕೂ ಎಂದು ಬಯಸುತ್ತಾರೆಂದರೇ, ಅದ್ರಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವೇ ಇರೋದಿಲ್ಲ.
ಇದು ಇವತ್ತಿನ ವ್ಯವಸ್ಥೆ. ಯಾವ ಕಾರಣಕ್ಕಾಗಿ ತಮ್ಮನ್ನ ಗೌರವಿಸುವ ದಿನ ಬಂದಿದೆಯೋ ಅದೇ ಮಹಾನ್ ವ್ಯಕ್ತಿಯನ್ನ ಮರೆತು ಪೋಸ್ಟರ್-ಬ್ಯಾನರ್ ಪ್ರಚಾರ ಪಡೆಯುವ ಸಂಘಗಳು ಯಾವ ಅರ್ಥಕ್ಕೀವೆ ಎಂಬುದನ್ನ ಪ್ರಜ್ಞಾವಂತರು ಅರಿತುಕೊಳ್ಳಬೇಕಿದೆ.