ಮೈನಾರಿಟಿಗೆ ಟಿಕೆಟ್ ಕೊಡದಿದ್ದರೇ “ಶಿಗ್ಗಾಂವ್ ಟಿಕೆಟ್” ವಿನೋದ ಅಸೂಟಿಯವರಿಗೆ ಫಿಕ್ಸ್…!!!

ಟಿಕೆಟ್ ಬಗ್ಗೆ ವಿನೋದ ಅಸೂಟಿಯವರನ್ನ ಕೇಳಿದಾಗ ಮೊದಲು ಅಲ್ಪಸಂಖ್ಯಾತರಿಗೆ ಕೊಡಿ ಎಂದಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಸದರಾದ ನಂತರ ತೆರವಾದ ಶಿಗ್ಗಾಂವ ಕ್ಷೇತ್ರದ ಚುನಾವಣೆಯ ದಿನಾಂಕ ನಿಗದಿಯಾದ ತಕ್ಷಣವೇ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ದಿನೇ ದಿನೇ ಕಗ್ಗಂಟಾಗುತ್ತ ಮುನ್ನಡೆದಿದೆ.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಶಿಗ್ಗಾಂವ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಮತಗಳನ್ನ ಪಡೆದಿತ್ತು. ಅದೇ ಕಾರಣದಿಂದ ಈಗ ವಿನೋದ ಅಸೂಟಿ ಫೇವ್‌ರೇಟ್ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
ವಿನೋದ ಅಸೂಟಿಯವರ ಇತ್ತೀಚಿನ ವೈರಲ್ ವೀಡಿಯೋ..
ಮೈನಾರಿಟಿಯಲ್ಲಿ ಟಿಕೆಟ್ ತಮಗೆ ನೀಡಬೇಕೆಂದು ಪಟ್ಟು ಹಿಡಿದಿದ್ದು, ಹೈಕಮಾಂಡ್ ಮಣೆ ಹಾಕಿದರೇ, ವಿನೋದ ಅಸೂಟಿಯವರಿಗೆ ಟಿಕೆಟ್ ಸಿಗಲಾರದು. ಆದರೆ, ಬಿಜೆಪಿ ವಿರುದ್ಧ ಮುಸ್ಲಿಂಯೇತರ ಅಭ್ಯರ್ಥಿ ನಿಂತರೇ ಗೆಲ್ಲುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಎಲ್ಲ ಲೆಕ್ಕಾಚಾರಗಳನ್ನ ಗಮನಿಸಿದಾಗ ವಿನೋದ ಅಸೂಟಿ ಅವರಿಗೆ ಕೊನೆ ಕ್ಷಣದಲ್ಲಿ ಲಕ್ ಕುಲಾಯಿಸಿದರೂ ಅಚ್ಚರಿ ಪಡಬೇಕಾಗಿಲ್ಲ.