ಶಿಗ್ಗಾಂವನಲ್ಲಿ ಕಾಂಗ್ರೆಸ್ ಗೆಲುವು “ಇಸ್ಮಾಯಿಲ್ ತಮಾಟಗಾರ” ಪಾತ್ರ ಅವಿಸ್ಮರಣೀಯ…!!!

ಧಾರವಾಡ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಸದರಾದ ನಂತರ ತೆರವಾಗಿದ್ದ ಶಿಗ್ಗಾಂವ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸುವಲ್ಲಿ ಧಾರವಾಡದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರ ಪಾತ್ರ ಅವಿಸ್ಮರಣೀಯವಾಗಿದೆ ಎಂಬುದೀಗ ಎಲ್ಲರಿಗೂ ಗೊತ್ತಾಗಿರುವ ವಿಷಯವಾಗಿದೆ.
ಶಿಗ್ಗಾಂವ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಯಾಸೀರ್‌ಖಾನ್ ಪಠಾಣ ಅವರಿಗೆ ಟಿಕೆಟ್ ಘೋಷಣೆ ಆದ ತಕ್ಷಣವೇ, ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಅವರು ಬಂಡಾಯದ ಬಾವುಟ ಹಾರಿಸಿದ್ದರು. ಆಗ, ಆ್ಯಕ್ಟಿವ್ ಆಗಿದ್ದೆ ಇಸ್ಮಾಯಿಲ್ ತಮಾಟಗಾರ.
ಅಜ್ಜಂಫೀರ ಖಾದ್ರಿ ಅವರನ್ನ ಸಚಿವ ಜಮೀರ್ ಅಹ್ಮದ ಅವರ ಬಳಿ ಕರೆದುಕೊಂಡು ಹೋಗಿ, ಸಿಎಂ- ಡಿಸಿಎಂ ಜೊತೆ ಮಾತುಕತೆ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ನಂತರ, ಅಜ್ಜಂಫೀರ ಖಾದ್ರಿ ಅವರು ನಾಮಪತ್ರ ಹಿಂದೆ ಪಡೆದರು.
ಇಷ್ಟೇಕ್ಕೆ ಸುಮ್ಮನಿರದ ಇಸ್ಮಾಯಿಲ್ ತಮಾಟಗಾರ ಅವರು, ಅಜ್ಜಂಫೀರ ಖಾದ್ರಿ ಅವರು ನಿರಂತರವಾಗಿ ಕ್ಷೇತ್ರದಲ್ಲಿ ಜನರೊಂದಿಗೆ ಬೆರೆಯುವ ಕೆಲಸವನ್ನ ಜೊತೆಗಿದ್ದು ಮಾಡಿದ್ದು, ಇವತ್ತಿನ ಫಲಿತಾಂಶಕ್ಕೆ ಕಾರಣವಾಗಿದೆ ಎಂಬುದನ್ನ ಅಲ್ಲಗಳೆಯುವ ಹಾಗಿಲ್ಲ.