ಪ್ರಧಾನಿ ಮೋದಿ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿ: ಜಗದೀಶ ಶೆಟ್ಟರ

ಹುಬ್ಬಳ್ಳಿ: ಮೋದಿ ಆಡಳಿತದಿಂದ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಒನ್ ಕಂಟ್ರಿ – ಒನ್ ಟ್ಯಾಕ್ಸ್, ಒನ್ ಕಂಟ್ರಿ ಒನ್ ಒನ್ ರೇಷನ್ ಎಂಬ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡಾ ರೈತ ಮತ್ತು ಶ್ರಮಿತ ವರ್ಗಕ್ಕೆ 2.272 ಕೋಟಿ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ, ರೈತರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ, ಹಣ್ಣು, ತರಕಾರಿ ಬೆಳೆಗಾರರಿಗೆ ಗರಿಷ್ಠ ಒಂದು ಹೆಕ್ಟೇರ್ ಗೆ 15000 ಪರಿಹಾರ ನೀಡಿದೆ. ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ 1.25 ಲಕ್ಷ ಕಾರ್ಮಿಕರಿಗೆ ತಲಾ 2000 ಒಂದು ಬಾರಿಯ ಪರಿಹಾರಕ್ಕೆ 25 ಕೋಟಿ ಮೀಸಲಿಡಲಾಗಿದೆ. ನೈಸರ್ಗಿಕ ವಿಕೋಪ ಮೇಕೆ, ಕುರಿಗಳ ಸಾವು ಸಂಭವಿಸಿದ್ದಲ್ಲಿ 5000 ಪರಿಹಾರ ಒದಗಿಸಲಾಗಿದೆ ಎಂದರು.