ಶಿಕ್ಷಕ ಸಂಘದವರು ಶೆಟ್ಟರ-ಮುನೇನಕೊಪ್ಪ ಭೇಟಿ ಮಾಡಿದ್ದೇಕೆ..? ಇವರನ್ನ ನೋಡಿ ಅವರಿಬ್ಬರು ಹೇಳಿದ್ದೇನು..?

ಹುಬ್ಬಳ್ಳಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮತ್ತು ಕರ್ನಾಟಕ ನಗರ ಮೂಲಭೂತ ಸೌಕರ್ಯ ನಿಗಮದ ಅಧ್ಯಕ್ಷ ಹಾಗೂ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪರನ್ನ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಭೇಟಿ ಮಾಡಿದ್ರು. ಕಾರಣವೇನು ಎನ್ನೋದನ್ನ ಪೂರ್ತಿಯಾಗಿ ಓದಿ ತಿಳಿಯಿರಿ.
ಶಿಕ್ಷಕರು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇವುಗಳನ್ನ ಬರುವ ಅಧಿವೇಶನದಲ್ಲಿ ಜಾರಿಗೆ ಬರುವಂತೆ ಚರ್ಚಿಸಿ ಜಾರಿಗೆ ತರಲು ಪ್ರಯತ್ನ ಮಾಡುವಂತೆ ಕೋರಿದರು. ಈಗಾಗಲೇ ಶಿಕ್ಷಣ ಇಲಾಖೆಯಲ್ಲಿದ್ದ ಮಹದೇವ ಮಾಳಗಿಯವರ ಸ್ವಯಂ ನಿವೃತ್ತಿಯನ್ನ ಸರಕಾರ ನೀಡಲು ಒಪ್ಪಿಗೆ ನೀಡಿದೆ. ಆದರೆ, ಆ ಕುಟುಂಬಕ್ಕೆ ನೌಕರಿಯ ಅವಶ್ಯಕತೆಯಿದ್ದು, ಅದನ್ನ ಸಿಎಂ ವಿಶೇಷ ಪ್ರಕರಣ ಎಂದು ಪರಿಗಣನೆ ಮಾಡಿಸುವಂತೆ ಶಿಕ್ಷಕ ಸಂಘದವರು ಮನವಿ ಮಾಡಿಕೊಂಡರು.
ಮಹದೇವ ಮಾಳಗಿಯವರ ಮನೆಗೂ ಭೇಟಿ ನೀಡುವಂತೆ ಮನವಿ ಮಾಡಿಕೊಂಡ ಅಶೋಕ ಸಜ್ಜನರಿಗೆ, ಶಂಕರ ಪಾಟೀಲಮುನೇನಕೊಪ್ಪ ತಕ್ಷಣವೇ ಸ್ಪಂಧಿಸಿ, ಮನೆಗೆ ಸಧ್ಯದಲ್ಲೇ ಹೋಗಿ ಬರುವುದಾಗಿ ಹೇಳಿದರು. ಮಹದೇವ ಮಾಳಗಿಯವರ ಕುಟುಂಬಕ್ಕೆ ಸಹಕಾರ ನೀಡಬೇಕೆಂಬ ಕಳಕಳಿಯನ್ನ ಮೆಚ್ಚಿಕೊಂಡ ಶಂಕರ ಪಾಟೀಲಮುನೇನಕೊಪ್ಪ, ಇಲಾಖೆಯ ಮಂತ್ರಿಯೊಂದಿಗೆ ಮಾತನಾಡಿ ಕ್ರಮ ಜರುಗಿಸಲು ಮುಂದಾಗುವುದಾಗಿ ಹೇಳಿದರು.
ನಿಯೋಗದಲ್ಲಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಕಾರ್ಯಾಧ್ಯಕ್ಷ ಶರಣಪ್ಪ ಗೌಡ್ರು ಆರ್.ಕೆ, ಉಪಾಧ್ಯಕ್ಷ ಡಿ.ಟಿ.ಬಂಡಿವಡ್ಡರ, ಡಿ. ಎಸ್. ಭಜಂತ್ರಿ, ಗೋವಿಂದ ಜುಜಾರೆ, ಆನಂದ ದುಂದೂರ ಮುಂತಾದವರು ಉಪಸ್ಥಿತರಿದ್ದರು