ಪ್ರಕೃತಿ ವಿಕೋಪ ಎದುರಿಸಲು ಧಾರವಾಡ ಜಿಲ್ಲಾಡಳಿತ ಸಜ್ಜು: ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪ್ರಕೃತಿಯ ವಿಕೋಪ ಎದುರಿಸಲು ಜಿಲ್ಲಾಡಾಳಿತ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿಂದು ಪ್ರಕೃತಿ ವಿಕೋಪ ನಿರ್ವಹಣೆಯ ಜೀವ ರಕ್ಷಕ ಸಾಮಗ್ರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಮಾತನಾಡಿದರು. ಜನರೇಟರ್, ಕಾಂಕ್ರೀಟ್ ಕತ್ತರಿಸುವ ಯಂತ್ರಗಳು ಆಪಾತ್ಕಾಲದಲ್ಲಿ ಸಹಾಯಕ್ಕೆ ಬರುತ್ತವೆ ಎಂದರು.
ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಚಾಲನೆ
ಇದೇ ಸಂದರ್ಭದಲ್ಲಿ ಸಚಿವರು ಸಂಚಾರಿ ಪಶು ಚಿಕಿತ್ಸಾಲಯಕ್ಕೆ ಚಾಲನೆ ನೀಡಿದರು. ತುರ್ತು ಸಂದರ್ಭದಲ್ಲಿ ಜಾನುವಾರುಗಳ ಸ್ಥಳಗಳಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ. ಸಂಚಾರಿ ಚಿಕಿತ್ಸಾಲಯದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳನ್ನು ಅಳವಡಿಸಲಾಗಿದೆ. ಪಶುತಜ್ಞರು ವಾಹನದೊಂದಿಗೆ ಇರುವರು. ಸಂದರ್ಭದಲ್ಲಿ ರೈತರು ಸಹಾಯವಾಣಿ ಸಂಖ್ಯೆ 1962 ಕರೆ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.