ಲಾಕ್‌ಡೌನ್ ಸ್ವತಃ ಫೀಲ್ಡಿಗಿಳಿದ ಸಚಿವ ಜಗದೀಶ ಶೆಟ್ಟರ
ಹುಬ್ಬಳ್ಳಿ: ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಇಂದು ನಗರದ ಸಿಬಿಟಿ, ಗದಗ ರಸ್ತೆ, ದುರ್ಗದಬೈಲ, ಹೊಸೂರ, ಚಾಣಕ್ಯಪುರಿ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಿ ರವಿವಾರದ ಲಾಕ್ ಡೌನ್ ಪರಿಶೀಲಿಸಿದರು.
ಸಂಡೇ ಲಾಕ್‌ಡೌನ್ ವೇಳೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಸ್ವತಃ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಿದರು.
ನಂತರ ಸರ್ಕ್ಯೂಟ್ ಹೌಸಿನಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಚರ್ಚಿಸಿ, ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.