ದೆಹಲಿ, ಅಜ್ಮೀರ್ ನಿಂದ ಬಂದಂತವರಿಂದಲೇ ಕೊರೋನಾ ಹೆಚ್ಚು: ಜಗದೀಶ ಶೆಟ್ಟರ

ಚಿತ್ರದುರ್ಗ: ದೆಹಲಿ ಮತ್ತು ಅಜ್ಮೀರಿನಿಂದ ಬಂದವರಿಂದಲೇ ಕೊರೋನಾ ಹೆಚ್ಚಾಗಿದೆ. ತಬ್ಲಿಘಿಗಳಿಂದಲೇ ಕೊರೋನಾ ಹೆಚ್ಚಾಗಿರುವುದನ್ನು ಜನ ಅರ್ಥ ಮಾಡಿಕೊಡಿದ್ದಾರೆಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಅವರು ಕಾಮಿಡಿ ಕಣ್ಣಿಂದ ನೋಡುತ್ತಿದ್ದಾರೆ. ಅವರಿಗೆ ಯಾರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೆಟ್ ಕೊಟ್ಟರೂ ಟೀಕಿಸುತ್ತಿದ್ದಾರೆ. ಅವರಿಗೆ ಪ್ರತಿಪಕ್ಷ ನಾಯಕನಾಗಿ ಇರಲಿಕ್ಕೆ ಯೋಗ್ಯರಲ್ಲ. ಸಿದ್ದರಾಮಯ್ಯನವರು ಅರ್ಥ ಆಗಲಿಲ್ಲ ಅಂದ್ರೆ ಅವರು ಕಣ್ಣಿಗೆ ಹಾಕಿಕೊಂಡಿರುವ ಕೋಮುವಾದದ ಪರದೆ ತೆಗೆಯಬೇಕೆಂದು ಟೀಕಿಸಿದರು.