ಕೊರೋನಾ ಮೂರು-ಆರು ತಿಂಗಳಿಗೆ ಮುಗಿಯೋದಲ್ಲ: ಸಚಿವ ಜಗದೀಶ ಶೆಟ್ಟರ

ಚಿತ್ರದುರ್ಗ: ಕೊರೋನಾ ಎನ್ನುವುದು ಪಾರ್ಟ್ ಅಂಡ್ ಪಾರ್ಶಿಯಲ್ ಆಗಿದೆ. ಮೂರು ತಿಂಗಳಿಗೆ, ಆರು ತಿಂಗಳಿಗೆ ಮುಗಿಯುವುದಿಲ್ಲ. ಕೊರೋನಾ ಮತ್ತು ಆರ್ಥಿಕತೆಯನ್ನು ಒಟ್ಟಾಗಿ ಪೇಸ್ ಮಾಡಬೇಕಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿಯವರು 20ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಮಾತನಾಡಿದ ಶೆಟ್ಟರ, ಹಂತ ಹಂತವಾಗಿ ಲಾಕ್ ಡೌನ್ ರಿಲ್ಯಾಕ್ಸ್ ಮಾಡಲಾಗುತ್ತದೆ. ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸಗಳಿಲ್ಲ. ಸುಮ್ಮನೆ ಕುಳಿತಿದ್ದರೆ ರಾಂಗ್ ಮೆಸೇಜ್ ಹೋಗುತ್ತದೆ ಎಂಬ ಕಾರಣಕ್ಕೆ ಟೀಕೆ ಮಾಡುತ್ತಾರೆ. ತುಂಬಾ ಪರಿಣಾಮಕಾರಿಯಾಗಿ ಸರ್ಕಾರ ಕೊರೋನಾ ನಿಯಂತ್ರಣ ಮಾಡುತ್ತಿದೆ. ಡಿಕೆಶಿ, ಸಿದ್ದರಾಮಯ್ಯ ಕೇವಲ ಟೀಕೆ ಮಾಡುವುದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಇಂತ ಸಮಯದಲ್ಲಿ ರಾಜಕೀಯ ಮಾಡದೆ ಮುತ್ಸದ್ದಿ ರಾಜಕಾರಣಿಗಳಾಗಿ ಸಲಹೆ ಕೊಡಿ ಎಂದರು.