Posts Slider

Karnataka Voice

Latest Kannada News

ಯಾರೋ ‘ದಿಲ್ಲಿ’ಗೀ ಹೋದ್ರ್.. ಅವರ್ ಬೀಗ್ರ್ ಭಾಳ್ ಮಂದಿ ಅದಾರ್ ದಿಲ್ಯಾಗ್…!

Spread the love

ಹುಬ್ಬಳ್ಳಿ: ಅರವಿಂದ ಬೆಲ್ಲದ ಅವರು ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಅಲ್ಲದೇ ಅವರ ಪತ್ನಿಯವರ ಸಂಬಂಧಿಕರು ಬಹಳಷ್ಟು ಜನರು ದೆಹಲಿಯಲ್ಲಿ ಇರುವುದರಿಂದ ಸ್ವಾಭಾವಿಕವಾಗಿ ದೆಹಲಿಗೆ ಹೋಗಿದ್ದಾರೆ. ಇದನ್ನೇ ಭಿನ್ನಮತ ಎಂದರೇ ಏನು ಹೇಳುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬೆಲ್ಲದ ಅವರು ನನಗೆ ವಾಟ್ಸಫ್ ಮೆಸೇಜ್ ಕಳಿಸಿದ್ದಾರೆ. ನನ್ನ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ ಎಂದಿದ್ದಾರೆ. ಸುಮಾರು ಜನರು ವೈಯಕ್ತಿಕ ಹಾಗೂ ಖಾಸಗಿ ಕಾರ್ಯಕ್ರಮಕ್ಕೆ ದೆಹಲಿ ಹೋಗುತ್ತಾರೆ ಅದನ್ನೇ ಭಿನ್ನಮತ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಇದೇ ಸಮಯದಲ್ಲಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ದೆಹಲಿಗೆ ಹೋದ ತಕ್ಷಣವೇ ಪಕ್ಷದಲ್ಲಿ ಭಿನ್ನಮತ ಹೇಗೆ ಆಗತ್ತೆ ಎಂದು ಪ್ರಶ್ನಿಸಿದರು.


Spread the love

Leave a Reply

Your email address will not be published. Required fields are marked *