“ಶಿವಳ್ಳಿಯ ಶಂಕರ ಮುಗದ”ಗೆ ಒಲಿದು ಬಂದ “ಸಹಕಾರ ರತ್ನ” ಪ್ರಶಸ್ತಿ…
1 min readಬೆಂಗಳೂರು: ಗ್ರಾಮೀಣ ಪ್ರದೇಶದಿಂದ ಬಂದು ಸಹಕಾರಿ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಧಾರವಾಡ ಕೆಎಂಎಫ್ ಹಾಲಿ ಅಧ್ಯಕ್ಷ ಶಂಕರ ಮುಗದ ಅವರಿಗೆ ಇಂದು ಸಹಕಾರ ರತ್ನ ಪ್ರಶಸ್ತಿಯನ್ನ ರಾಜಧಾನಿಯಲ್ಲಿ ವಿತರಣೆ ಮಾಡಲಾಯಿತು.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಶಂಕರ ವೀರಪ್ಪ ಮುಗದ, ಸಾಕಷ್ಟು ಸಂಕಷ್ಟಗಳನ್ನ ಎದುರಿಸಿ ಬಂದವರು. ಗ್ರಾಮದಲ್ಲಿ ಇದ್ದುಕೊಂಡೇ ಕೆಎಂಎಫ್ ನಲ್ಲಿ ಕಾರ್ಯವನ್ನ ಆರಂಭಿಸಿದ್ದರು.
ದಶಕಗಳವರೆಗೆ ಕೆಎಂಎಫ್ ನ ಅಭಿವೃದ್ಧಿಗಾಗಿ ಶ್ರಮಿಸಿ ರೈತ ಕುಟುಂಬಗಳಿಗೆ ಸಹಕಾರ ನೀಡಿದ್ದಾರೆ. ಇವರ ಸೇವೆಯನ್ನ ಗುರುತಿಸಿ, ರಾಜ್ಯ ಸರಕಾರ ‘ಸಹಕಾರ ರತ್ನ’ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.