ಶಕ್ತಿಗೆ “100” ದಿನ ತುಂಬಿದಾಗಲೂ ಧಾರವಾಡ “ಕೇದಾರಸ್ವಾಮಿ” ತೆಗೆದ ಪೋಟೋಗೆ “ಇನ್ನಿಲ್ಲದ ಮನ್ನಣೆ”….

ಶಕ್ತಿಯೋಜನೆ ಅಡಿ ಎಷ್ಟು ಮಹಿಳೆಯರು ಓಡಾಟ ನಡೆಸಿದ್ದಾರೆ ಗೊತ್ತಾ…?
ಶಕ್ತಿ ಯೋಜನೆಯ ಅಡಿ ಜೂನ್ 11 ರಿಂದ ಸೆಪ್ಟೆಂಬರ್ 19 ರವರೆಗೆ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ ಒಟ್ಟು 62,55,39,727ಕ್ಕೆ ತಲುಪಿದೆ. ಮಹಿಳಾ ಪ್ರಯಾಣಿಕರ ಟಿಕೆಟ್ ದರ 1456,09,64,867 ಕೋಟಿ ರೂಪಾಯಿ ಆಗಿದೆ.
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಆರಂಭಿಸಿರುವ ಉಚಿತ ಬಸ್ ಸಂಚಾರದ ಶಕ್ತಿ ಯೋಜನೆಗೀಗ ಭರ್ತಿ ನೂರು ದಿನ. ಆದರೆ, ಅದಕ್ಕೊಂದು “ಕ್ಲಾಸ್” ಲಾಜಿಕ್ ನೀಡಿದ್ದು ಮಾತ್ರ ಧಾರವಾಡದ ಹಿರಿಯ ಪೋಟೋಗ್ರಾಫರ್ ಕೇದಾರನಾಥ ಸ್ವಾಮಿ.
ಹೌದು… ಯೋಜನೆಗೆ ಚಾಲನೆ ಸಿಗುವ ಸಮಯದಲ್ಲಿ ಧಾರವಾಡದಲ್ಲಿ ಈ ಪೋಟೋ ತೆಗೆಯಲಾಗಿತ್ತು. ಆ ಭಾವಚಿತ್ರ ಎಷ್ಟೊಂದು ಫೇಮಸ್ ಮತ್ತು ಟ್ರೋಲ್ ಆಯಿತೆಂದರೇ, ಸಂಗೊಳ್ಳಿ ಗ್ರಾಮದ ಸಂಗವ್ವ ಖಾಸಗಿ ವಾಹಿನಿಯೊಂದರಲ್ಲಿ ಸ್ವತಃ ಸಿಎಂ ಸಿದ್ಧರಾಮಯ್ಯನವರು ಕೈ ಮುಗಿಯುವಂತಾಯಿತು.
ಈಗ ಈ ದಿನಗಳಿಗೆ ನೂರರ ಸಂಭ್ರಮ. ಕೋಟಿ ಕೋಟಿ ಮಹಿಳೆಯರು ಬಸ್‌ಲ್ಲಿ ಸಂಚಾರ ಮಾಡಿದ್ದಾರೆ. ಇದಕ್ಕಾಗಿ ಸರಕಾರ ಕೋಟಿ ಕೋಟಿ ಹಣವನ್ನ ವ್ಯಯಿಸಿದೆ. ಇಂತಹ ಸಂದರ್ಭದಲ್ಲಿ ಕೂಡಾ ಮತ್ತೆ ಸ್ಮರಿಸೋಕೆ ಸಿಗೋದು ಛಾಯಾಗ್ರಾಹಕ ಕೇದಾರನಾಥ ಅವರು ತೆಗೆದ ಭಾವಚಿತ್ರ.
ಅದೇ ಸ್ಮರಣೆಯನ್ನು ಖಾಸಗಿ ಚಾನಲ್‌ವೊಂದು ಸಂಗವ್ವಳನ್ನ ಬಸ್ಸಿನ ಒಳಗಡೆ ಕಳಿಸುವ ರೀತಿಯ ಚಿತ್ರವನ್ನ ರಚನೆ ಮಾಡಿದ್ದಾರೆ. ಇಷ್ಟೇಲ್ಲಾ, ಕಲ್ಪನೆಗಳಿಗೆ ಕಾರಣವಾದ ಪೋಟೋ ಧಾರವಾಡದ್ದು ಮತ್ತೂ ಅದನ್ನ ತೆಗೆದಿದ್ದು ಕೇದಾರನಾಥ ಸ್ವಾಮಿ ಅನ್ನೋದು ಇತಿಹಾಸವಾಯಿತು.