Posts Slider

Karnataka Voice

Latest Kannada News

ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಯ ‘ರತಿಕ್ರೀಡೆ’ ವೀಡಿಯೋ ರಿಲೀಸ್…!

1 min read
Spread the love

ಬೆಂಗಳೂರು: ರಾಜ್ಯದ ಎರಡು ಜಿಲ್ಲೆಗಳಲ್ಲಿ ಎರಡು ವೀಡಿಯೋಗಳು ಬಹಿರಂಗಗೊಂಡಿದ್ದು, ಒಂದನ್ನ ತಾವೇ ವಾಟ್ಸಾಫ್ ಗ್ರೂಫಲ್ಲಿ ಹಾಕಿಕೊಂಡಿದ್ದರೇ, ವಿಧಾನಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿಯ ವೀಡಿಯೋವನ್ನ ಅಪರಿಚಿತರು ಹೊರಹಾಕಿದ್ದಾರೆ.

ವಿಜಯಪುರ: ವಿಜಯಪುರ ಬಾಗಲಕೋಟ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಖಾಸಗಿ ವಿಡಿಯೋ ರಿಲೀಸ್ ಆಗಿದ್ದು, ಮಹಿಳೆಯೊಂದಿಗೆ ರತಿಕ್ರೀಡೆಯಲ್ಲಿರುವ ವೀಡಿಯೋ ಇದಾಗಿದೆ.

ಮಹಿಳೆಯೊಂದಿಗೆ ಖಾಸಗಿಯಾಗಿರುವ ಮಹಿಳೆಯೊಂದಿಗೆ ಇರುವ ವೀಡಿಯೋವನ್ನ ಅಪರಿಚಿತರು ರಿಲೀಸ್ ಮಾಡಿದ್ದಾರೆ. ಈಗಾಗಲೇ ವಿಡಿಯೋ ರಿಲೀಸ್ ಮಾಡುವ ಬಗ್ಗೆ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಲೋಣಿ ಪ್ರತಿಕ್ರಿಯೆ ನೀಡಿದ್ರು.

ಗದಗ: ಜಿಲ್ಲೆಯ ಕೆಲ ರಾಜಕೀಯ ನಾಯಕರು, ಜಿಲ್ಲಾ ಪೊಲೀಸರಿರುವ ವಾಟ್ಸ್ ಆ್ಯಪ್ ಗ್ರೂಪ್ ವೊಂದರಲ್ಲಿ ರಾಜಕೀಯ ನಾಯಕನೊಬ್ಬ ಹರಿಬಿಟ್ಟ ತನ್ನದೇ ರಾಸಲೀಲೆಯ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಇಡೀ ದೇಶಕ್ಕೆ ರಾಜಕೀಯ ಮೌಲ್ಯಗಳನ್ನು ಸಾರಿದ ರಾಜ್ಯದಲ್ಲಿ ಈಚೆಗೆ ರಾಜಕೀಯ ನಾಯಕರ ರಾಸಲೀಲೆಯ ಅಶ್ಲೀಲ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.  ಇದೀಗ ಅಂತಹದ್ದೇ ಒಂದು ವೀಡಿಯೋ ಜಿಲ್ಲೆಯಲ್ಲಿಯೂ ಸಂಚಲನ ಮೂಡಿಸಿದೆ.

ಗದಗ-ಬೆಟಗೇರಿ ನಗರದ ಜಿಲ್ಲಾ ಕೈಮಗ್ಗ ನೇಕಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಜೇರಬಂಡಿ ಎನ್ನುವ ರಾಜಕೀಯ ನೇತಾರ, ಅಪರಿಚಿತ ಮಹಿಳೆಯೊಂದಿಗೆ ನಡೆಸಿದ ತನ್ನದೇ ರಾಸಲೀಲೆಯ ವೀಡಿಯೊವೊಂದನ್ನು ಹರಿಬಿಟ್ಟಿದ್ದಾನೆ.

ಸೋಮವಾರ (ಡಿ.6) ರಂದು ಮಧ್ಯಾಹ್ನ 2 ಗಂಟೆಗೆ ಖುದ್ದು ರಮೇಶ ಜೇರಬಂಡಿ ತನ್ನದೇ ರಾಸಲೀಲೆಯ ವೀಡಿಯೊ ಹಂಚಿಕೊಂಡಿದ್ದಾನೆ. ವೀಡಿಯೋ ಶೇರ್ ಮಾಡಿದ 20 ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಅದನ್ನು ಗ್ರೂಪ್ಪಿನ ಸದಸ್ಯರು ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ವೀಡಿಯೊ ಅವಳಿ ನಗರದಲ್ಲಿ ಸಾಕಷ್ಟು ವೈರಲ್ ಸಹ ಆಗಿದೆ.

ಗದಗ-ಬೆಟಗೇರಿಯ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡ ಎನ್ನಲಾಗುತ್ತಿರುವ ರಮೇಶ ಜೇರಬಂಡಿ, ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕೆಲ ವರ್ಷಗಳ ಬಳಿಕ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದನಂತೆ.  ಬಿಜೆಪಿಯಲ್ಲಿ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅಲ್ಲಿ ಸೂಕ್ತ ಸ್ಥಾನಮಾನ ಸಿಗದಿದ್ದಾಗ ಪುನಃ ಮಾತೃಪಕ್ಷ ಕಾಂಗ್ರೆಸ್‌ಗೆ ಬರಲು ಉತ್ಸಾಹ ತೋರಿದ್ದನಾದರೂ, ಸದ್ಯ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೇ ತಟಸ್ಥನಾಗಿ ಉಳಿದಿದ್ದಾನೆ ಎನ್ನಲಾಗುತ್ತಿದೆ.

ಎರಡು ವೀಡಿಯೋಗಳು ಸಾಕಷ್ಟು ಕೆಟ್ಟದ್ದಾಗಿರುವುದರಿಂದ ಇವುಗಳನ್ನ ಇಲ್ಲಿ ಹಾಕಲಾಗುತ್ತಿಲ್ಲ.. ಗಮನಿಸಿ


Spread the love

Leave a Reply

Your email address will not be published. Required fields are marked *

You may have missed