ಅದು ಫೇಕ್ ಸಿಡಿ: ರಮೇಶ ಅದು ಫೇಕ್ ಅಲ್ಲಾ: ದಿನೇಶ 100 ಕೋಟಿ ಮಾನನಷ್ಟ ಹಾಕ್ತೇವಿ: ಬಾಲಚಂದ್ರ
1 min readಬೆಂಗಳೂರು: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರದ್ದು ಎನ್ನಲಾದ ಅಶ್ಲೀಲ ಸಿಡಿ ಹೊರಬಿದ್ದ ನಂತರ ಹಲವು ರೀತಿಯ ವ್ಯಾಖ್ಯಾನಗಳು ಆರಂಭಗೊಂಡಿದ್ದು, ಅದು ಫೇಕ್ ಸಿಡಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದರೇ, ಅದು ಫೇಕ್ ಸಿಡಿ ಅಲ್ಲವೆಂದು ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಹೇಳಿದ್ದಾರೆ. ಇವರಿಬ್ಬರಿಗೂ ಭಿನ್ನವಾಗಿ ರಮೇಶ ಜಾರಕಿಹೊಳಿಯವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಹೇಳಿದ್ದಿಷ್ಟು..
ನನ್ನ ಬಳಿ ಅನ್ಯಾಯಕ್ಕೊಳಗಾದ ಯುವತಿಯ ಮನೆಯವರು ಬಂದು ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದು, ಸಿಡಿಯಲ್ಲಿರುವುದು ಸತ್ಯ ಎಂದು ಕಂಡ ಮೇಲೆ ನಾನು ದೂರು ಕೊಡಲು ಬಂದಿದ್ದು. ಮೇಲ್ನೋಟಕ್ಕೆ ಎಲ್ಲವೂ ಸತ್ಯ. ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ಮಾಡಿ, ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು.
ರಮೇಶ ಜಾರಕಿಹೊಳಿ ಹೇಳಿದ್ದಿಷ್ಟು..
ಫೇಕ್ ಸಿಡಿಯಿದು. ರಾಜೀನಾಮೆ ಕೊಡುವ ಪ್ರಶ್ನೆ ಬರೋದಿಲ್ಲ. ಫೇಕ್ ಸಿಡಿಗಳಿಗೆ ರಾಜೀನಾಮೆ ಕೊಟ್ಟಗೋಂತ ಹೋದ್ರ್ ವಿಧಾನಸೌದಾನ್ ಖಾಲಿ ಆಕೈತಿ. ಆ ಯುವತಿ ಕೂಡಾ ಯಾರು ಎನ್ನುವುದು ನಂಗೆ ಗೊತ್ತಿಲ್ಲ.
ಬಾಲಚಂದ್ರ ಜಾರಕಿಹೊಳಿ ಹೇಳಿದ್ದಿಷ್ಟು..
ಮುಖ್ಯಮಂತ್ರಿಗಳನ್ನ ಭೇಟಿಯಾಗಿ ಬಂದಿದ್ದೇನೆ. ಸಮಗ್ರ ತನಿಖೆ ನಡೆಸುವಂತೆ ಕೇಳಿಕೊಂಡಿದ್ದೇನೆ. ದೂರು ನೀಡಿದವರ ಮೇಲೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ನಡೆಸಲಾಗಿದೆ. ರಮೇಶ ಜಾರಕಿಹೊಳಿಯವರು ರಾಜೀನಾಮೆ ಕೊಡುವುದು ಬೇಡ. ತನಿಖೆಯಾಗಿ ತಪ್ಪಿತಸ್ಥರು ಎಂದು ಗೊತ್ತಾದರೆ, ಅವರನ್ನ ರಾಜಕೀಯ ಸನ್ಯಾಸಕ್ಕೆ ನಾನೇ ಕಳಿಸುತ್ತೇನೆ.