ಕಾಂಗ್ರೆಸ್ ಮಾಜಿ ಅಧ್ಯಕ್ಷರ ಸೆಕ್ಸ್ ಪೋಸ್ಟ್: ಚಿಕ್ಕಮಕ್ಕಳು ಹಾಕಿದ್ರಂತೆ- ವಿಷಾದ ವ್ಯಕ್ತಪಡಿಸಿದ ಜಿಲ್ಲಾ ಕಾಂಗ್ರೆಸ್
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ ಮೀಡಿಯಾ ಗ್ರೂಫಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಜಿಲ್ಲಾ ಕಾಂಗ್ರೆಸ್ ವಿಷಾದ ವ್ಯಕ್ತಪಡಿಸಿದೆ.
ಈ ಬಗ್ಗೆ ಯಾವ ಗ್ರೂಫಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರೋ ಅದೇ ಗ್ರೂಫಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಕ್ಷಮಾಪಣೆ ಕೇಳಿದ್ದಾರೆ.
ಈ ಬಗ್ಗೆ ರವಿಗೌಡ ಪಾಟೀಲರ ಹೇಳಿಕೆಯನ್ನ ಹಾಕಿದ್ದು, ಚಿಕ್ಕಮಕ್ಕಳು ಇಂತಹ ಪೋಸ್ಟ್‌ನ್ನ ಮಾಡಿದ್ದಾರೆಂದು ಪಾಟೀಲ ಹೇಳಿಕೊಂಡಿದ್ದಾರೆ.
ಇಂತಹ ಅಶ್ಲೀಲತೆಯನ್ನ ಮೊಬೈಲ್‌ನಲ್ಲಿ ಇರದ ಹಾಗೇ ನೋಡಿಕೊಳ್ಳುವ ಜವಾಬ್ದಾರಿಯೂ ರವಿಗೌಡ ಪಾಟೀಲರಿಗೆ ಇದೆಯಂದು ಅರಿತುಕೊಳ್ಳಬೇಕಿದೆ.