Posts Slider

Karnataka Voice

Latest Kannada News

ಸೆಟ್ ಬ್ಯಾಕ್ ಬಿಟ್ಟಿಲ್ವಾ: ಹುಬ್ಬಳ್ಳಿಯಲ್ಲಿ ಬೀಳುತ್ತಿದೆ ಮನೆ: ಕಾರ್ಯಾಚರಣೆ ಹೆಂಗಿದೆ ನೋಡಿ..

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಆದೇಶಗಳನ್ನ ಗಾಳಿಗೆ ತೂರಿ ಮನೆಗಳನ್ನ ನಿರ್ಮಾಣ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲು ಕಾರ್ಪೋರೇಷನ್ ಮುಂದಾಗಿದ್ದು, ಸೆಟ್ ಬ್ಯಾಕ್ ಬಿಡದ ಮನೆಯ ಕಾರ್ಯಾಚರಣೆ ನಡೆಸುತ್ತಿದೆ.

ಹುಬ್ಬಳ್ಳಿಯ ಗಾಂಧಿವಾಡಾ ಪ್ರದೇಶದಲ್ಲಿನ ಡೇವಿಡ್ ಗಂಟಾ ಪ್ರಸಾದ ಎಂಬುವರು ಸೆಟ್ ಬ್ಯಾಕ್ ಬಿಡದೇ ಮನೆಯನ್ನ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಮಹಾನಗರ ಪಾಲಿಕೆ ಸಾಕಷ್ಟು ಬಾರಿ ನೋಟೀಸ್ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ಸೆಟ್ ಬ್ಯಾಕ್ ತೆರವನ್ನ ಪೊಲೀಸರ ಉಪಸ್ಥಿತಿಯಲ್ಲಿ ನಡೆಸಲಾಗುತ್ತಿದೆ.

ಮನೆ ನಿರ್ಮಾಣದ ಪರವಾನಿಗೆ ಪಡೆಯುವಾಗ ನೀಡುವ ಆದೇಶಗಳನ್ನ ಪಾಲನೆ ಮಾಡುವುದಾಗಿ ಮುಚ್ಚಳಿಕೆಯನ್ನ ಬರೆಸಿಕೊಂಡಿರಲಾಗತ್ತೆ. ಮನೆ ನಿರ್ಮಾಣವಾದ ನಂತರ ನಡೆಯುವ ಕಾನೂನು ಉಲ್ಲಂಘನೆಯನ್ನ ಸರಿಪಡಿಸಿಕೊಳ್ಳುವ ಗೋಜಿಗೆ ಹೋಗದೇ ಇದ್ದರೇ ಮಹಾನಗರ ಪಾಲಿಕೆ ಏನು ಮಾಡಬಹುದೆಂಬುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ.

ಸೆಟ್ ಬ್ಯಾಕ್ ತೆರವು ಮಾಡುವಲ್ಲಿ ತೊಂದರೆಯಾಗಬಾರದೆಂದು ಮನೆಯ ಸುತ್ತಲೂ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಯಾವುದೇ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಯುತ್ತಿದೆ.


Spread the love

Leave a Reply

Your email address will not be published. Required fields are marked *