ಸೆಲ್ಪೀ ಕ್ರೇಜ್: ಕಿರೇಸೂರ ಬಳಿ ಮೂವರು ಯುವಕರು ನೀರು ಪಾಲು..
1 min readಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದ ಬಳಿಯಲ್ಲಿರುವ ಮಲಪ್ರಭಾ ಕಾಲುವೆಯ ಬಳಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಮೂರು ಯುವಕರು ನೀರು ಪಾಲಾಗಿದ್ದು, ಓರ್ವ ಯುವತಿಯನ್ನ ಕುರಿ ಕಾಯುವವರು ಕಾಪಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಸಂಭವಿಸಿದೆ.
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಸದಸ್ಯೆ ಸುವರ್ಣ ಕಲ್ಲಗುಂಟ್ಲಾ ಸಂಬಂಧಿಗಳಾದ ನಾಲ್ವರು ಕಿರೇಸೂರ ಬಳಿಯ ಕಾಲುವೆಯ ಬಳಿಯಲ್ಲಿ ಸೆಲ್ಪಿ ಪೋಟೊಗಾಗಿ ತೆರಳಿದ್ದರು. ಇದೇ ಸಮಯದಲ್ಲಿ ಜೇನು ನೊಣಗಳು ಬಂದ ಕಾರಣದಿಂದ ಭಯದಿಂದ ಎಲ್ಲರೂ ಓಡಿ ಹೋಗಿದ್ದು, ಅದರಲ್ಲಿ ಮೂರು ಯುವಕರು ನೀರಿನಲ್ಲಿಯೇ ನಾಪತ್ತೆಯಾಗಿದ್ದಾರೆ.
ಜೊತೆಗಿದ್ದ ಯುವತಿಯೋರ್ವಳು ಪೈಪ್ ಹಿಡಿದು ಜೋತು ಬಿದ್ದಿದ್ದಳು. ಆಕೆಯನ್ನ ಕುರಿ ಕಾಯುವವರು ಆಕೆಯನ್ನ ಬದುಕಿಸಿದ್ದು, ಜೊತೆಗಿದ್ದ ಇನ್ನೊಂದು ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನತಾಶಾ ಯುವರಾಜ ಭಂಡಾರಿ ಹಾಗೂ ಸಲ್ಮಾನ ಪಿಳ್ಳೆ ಬದುಕುಳಿದಿದ್ದು, ರೈಮಂಡ್ ಕ್ಲೇಮೆಂಟ್, ಸನ್ನಿ ಜಾನ್ಸನ ಕಲ್ಲಗುಂಟ್ಲಾ ಹಾಗೂ ಗಜಾನನ ರಾಜಶೇಖರ ಎಂಬುವವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ.
ಕಿರೇಸೂರ ಗ್ರಾಮದ ನೂತನ ಪಂಚಾಯತಿ ಸದಸ್ಯ ಪ್ರಭು ಗುಳಗಣ್ಣನವರ ಸೇರಿದಂತೆ ಗ್ರಾಮದ ಹಲವರು ಸ್ಥಳದಲ್ಲಿ ಉಪಸ್ಥಿರಿದ್ದು, ಯುವಕರನ್ನ ಹುಡುಕುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ನಾಶಿ, ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ, ಪಿಎಸೈ ಜಯಪಾಲ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕಾರ್ಯಾಚರಣೆ ನಡೆದಿದೆ.