ಹಿರಿಯ ಅಧಿಕಾರಿಗಳಿಗೆ ಕಳಿಸಿದ “ಸೆಲ್ಪಿ”- ಇನ್ಸಪೆಕ್ಟರ್ ಕಾಲಿಮಿರ್ಚಿ ತೇಜೋವಧೆಗೆ ಯತ್ನ…!!!
ಇನ್ಸಪೆಕ್ಟರ್ ತೇಜೋವಧೆಗೆ ಷಢ್ಯಂತ್ರ
ಅಧಿಕಾರಿಗಳಿಗೆ ಕಳಿಸಿದ ಸೆಲ್ಪಿ ವಿವಾದ
ಬೆಳಗಾವಿ: ಮಾಳಮಾರುತಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ಅವರು ರಾಜ್ಯೋತ್ಸವದ ಸಮಯದಲ್ಲಿ ಎಂಇಎಸ್‌ನ ರೌಡಿಷೀಟರ್ ಜೊತೆ ತೆಗೆದುಕೊಂಡ ಸೆಲ್ಪಿಯನ್ನ ವಿವಾದ ಮಾಡಲು ಹಲವರು ಮುಂದಾಗಿದ್ದಾರೆ.
ಇಲ್ಲಿರುವ ವೀಡಿಯೋ ಪೂರ್ಣ ನೋಡಿದರೇ, ಇನ್ಸಪೆಕ್ಟರ್ ಕಾಲಿಮಿರ್ಚಿ ರೌಡಿಷೀಟರ್‌ಗೆ ಏನು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿ ಅರ್ಥವಾಗತ್ತೆ.
ರಾಜ್ಯೋತ್ಸವದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಹಿರಿಯ ಅಧಿಕಾರಿಗಳ ಆದೇಶವಾಗಿತ್ತು. ಈ ಸಮಯದಲ್ಲಿ ರೌಡಿಷೀಟರ್ ಶುಭಂ ಮತ್ತು ಇನ್ನಿತರ ಜೊತೆ ಸೆಲ್ಪಿ ತೆಗೆದು ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದಾರೆ. ಇದೇ ಸಮಯದಲ್ಲಿ ಯೂಟ್ಯೂಬ್‌ನ ಓರ್ವರು ಅದನ್ನ ವೀಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಇದನ್ನೇ ಬಂಡವಾಳವಾಗಿಸುವ ಯತ್ನವಾಗಿ ಕೆಲವರು ಬಣ್ಣ ಕಟ್ಟಿ ಹರಿಬಿಟ್ಟಿದ್ದಾರೆ.
