ಹುಬ್ಬಳ್ಳಿ: ಬೀಗ ಹಾಕಿ ಶಾಲೆಗೆ ಹೋಗಿದ್ದ ಟೀಚರ್ ಮನೆಗೆ ಕನ್ನ ಹಾಕಿದ್ದ “ಖತರ್‌ನಾಕ್ ಹಗಲುಗಳ್ಳಿ” ಲಾಕ್…

ಹುಬ್ಬಳ್ಳಿ: ಹಳೇ ಬಟ್ಟೆ, ಹಳೇ ಸಾಮಾನು ತೆಗೆದುಕೊಳ್ಳುವ ನೆಪದಲ್ಲಿ ಬೀಗ ಹಾಕಿದ ಮನೆಯ ಲಾಕ್ ಮುರಿದು ಕೈಗೆ ಸಿಕ್ಕದ್ದನ್ನ ದೋಚುತ್ತಿದ್ದ ಲೇಡಿ ಮತ್ತು ಕದ್ದ ಮಾಲು ಮಾರಾಟ ಮಾಡಲು ಸಹಕರಿಸುತ್ತಿದ್ದ ಆಸಾಮಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಅಶೋಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆಟ್ಲಮೆಂಟ್ ಗಂಗಾಧರನಗರದ ನಿವಾಸಿ ರತ್ನವ್ವ ಎಂಬಾಕೆಯೇ ಖತರನಾಕ್ ಕಳ್ಳಿ. ಹಗಲಿನ ಸಮಯದಲ್ಲಿ ತನ್ನ ವರಸೆಯನ್ನ ತೋರಿಸುತ್ತಿದ್ದಳೆಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದರು.
ಮನೆಗೆ ಬೀಗ ಹಾಕಿ ಹೋದರೇ ಸೇಫ್ ಎಂದುಕೊಳ್ಳುವ ಜನರು ಇಂತಹ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ, ರತ್ನವ್ವಳಂಥ ಕಿಲಾಡಿಗಳು ಮನೆಯ ಬಾಗಿಲನ್ನೇ ನೋಡ್ತಾ ಇರ್ತಾರೆ.