ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲೇ ಶಿಕ್ಷಕರ ಕೋವಿಡ್ ಟೆಸ್ಟ್: ಹೆಂಗಿದೆ ಗೊತ್ತಾ ಪಠ್ಯಭ್ಯಾಸದ ತಯಾರಿ..
1 min readಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ದುರ್ಗೇಶ ಮಾದರ ಪಿ.ಎಚ್.ಸಿ.ಬ್ಯಾಹಟ್ಟಿಯಲ್ಲಿ ಕೋವಿಡ್ ತಪಾಸಣೆ ಮಾಡಿಸಿಕೊಂಡು ತಮ್ಮ ನೇತೃತ್ವದಲ್ಲಿಯೇ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ಟೆಸ್ಟ ಸಹ ಮಾಡಿಸುತ್ತಿದ್ದಾರೆ.
ಹೆಬಸೂರ ಶಾಲೆಯಲ್ಲಿ ದೇವೆಂದ್ರ ಪತ್ತಾರ ಮಕ್ಕಳಿಗಾಗಿ ಸಿದ್ಧತೆಯಲ್ಲೂ ತೊಡಗಿದ್ದಾರೆ.
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಯವರ ನೇತೃತ್ವದಲ್ಲಿಯೇ ಇಂದು 36 ಶಿಕ್ಷಕರ ಕೋವಿಡ್-19 ಟೆಸ್ಟ್ ನಡೆದಿದ್ದು, ನಾಳೆ ಸಂಜೆಯೊಳಗೆ ವರದಿ ನೀಡುವ ಸಾಧ್ಯತೆಯಿದೆ ಎಂದು ಬ್ಯಾಹಟ್ಟಿ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಶಿಕ್ಷಕರು ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ಬಂದು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲರ ಗಂಟಲು ದ್ರವವನ್ನ ತೆಗೆದುಕೊಳ್ಳಲಾಗಿದೆ. ಶಾಲೆ ಆರಂಭಕ್ಕೆ ಎರಡೇ ದಿನಗಳು ಬಾಕಿಯಿರುವುದರಿಂದ ಸಾಧ್ಯವಾದಷ್ಟು ಬೇಗನೇ ವರದಿ ನೀಡುವಂತೆ ಕೇಳಿಕೊಳ್ಳಲಾಗಿದೆಯಂತೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಶಾಲಾ ಆರಂಭಕ್ಕೆ ಪೂರ್ವ ತಯಾರಿಗಳು ಸಿದ್ಧಗೊಳ್ಳುತ್ತಿವೆ. ಎಷ್ಟೋ ತಿಂಗಳ ನಂತರ ಶಿಕ್ಷಕರು ಬೋರ್ಡಿನಲ್ಲಿ ಬರೆದು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದಕ್ಕೆ ಮುಂದಾಗುತ್ತಿದ್ದಾರೆ. ಕೊರೋನಾ ಓಡಿಸೋಣ ಎಂಬ ವಾಕ್ಯದೊಂದಿಗೆ ಶಿಕ್ಷಕರು ಸಿದ್ಧವಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಶಾಲೆಯಿಂದ ದೂರವಾಗಿ ಸುಮಾರು ಎಂಟು ತಿಂಗಳು ಕಳೆದಿವೆ. ಅದಾದ ನಂತರ ಹೊಸ ವರ್ಷಕ್ಕೆ ಶಾಲೆಗೆ ಕಾಲಿಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಎಷ್ಟು ಕೌತುಕವಿದೇಯೋ ಶಿಕ್ಷಕರಲ್ಲೂ ಅಷ್ಟೇ ಕೌತುಕ ಅಡಗಿದೆ. ಇಷ್ಟು ತಿಂಗಳ ನಂತರ ಶಾಲೆಗಳು ಆರಂಭವಾಗುತ್ತಿರುವುದು ಸಂತಸದ ವಿಷಯವಾಗಿದೆ.