Posts Slider

Karnataka Voice

Latest Kannada News

ಸ್ಕೂಲ್ ಜಮಾನಾ ಸೋಮವಾರದಿಂದಲೇ ಆರಂಭ: ಸಚಿವ ಸುರೇಶಕುಮಾರ

1 min read
Spread the love

ಬೆಂಗಳೂರು: ರಾಜ್ಯದ ಕೆಲವು ಭಾಗಗಳನ್ನ ಹೊರತುಪಡಿಸಿ ಎಲ್ಲ ಕಡೆಯೂ ಸೋಮವಾರದಿಂದಲೇ 6ನೇ ತರಗತಿಯಿಂದ 9ನೇ ತರಗತಿಯವರೆಗೆ ಪೂರ್ಣ ಪ್ರಮಾಣದ ಶಾಲೆಗಳನ್ನ ಆರಂಭಿಸುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಹೇಳಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿರುವ ಸಚಿವ ಸುರೇಶಕುಮಾರ ಅವರು, ಬೆಂಗಳೂರು ಹಾಗೂ ಕೇರಳ ಗಡಿ ಭಾಗದ ಶಾಲೆಗಳಲ್ಲಿ 8 ಮತ್ತು 9 ನೇ ತರಗತಿಯನ್ನ ಆರಂಭ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದ ಇನ್ನುಳಿದ ಪ್ರದೇಶಗಳಲ್ಲಿ ಸೋಮವಾರದಿಂದಲೇ 6ನೇ ತರಗತಿಯಿಂದ 9ನೇ ತರಗತಿಯವರೆಗೆ ಪೂರ್ಣ ಪ್ರಮಾಣದ ಶಾಲೆಗಳನ್ನ ಆರಂಭ ಮಾಡಲು ನಿರ್ಧರಿಸಲಾಗಿದೆ ಎಂದರು.

ತಜ್ಞರ ಅಭಿಪ್ರಾಯದ ಜೊತೆಗೆ ಆರೋಗ್ಯ ಇಲಾಖೆಯ ಜೊತೆಯೂ ಮಾತುಕತೆ ನಡೆಸಿ, ಈ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಪೋಷಕರು ಒಪ್ಪಿಗೆ ಪತ್ರ ಕೊಟ್ಟರೇ ಮಾತ್ರ ಶಾಲೆಗೆ ಬರಲು ಅವಕಾಶವಿದೆ ಎಂದು ಹೇಳಿದರು.

ಪಾಳಿ ಆದಾರದ ಮೇಲೆ ಶಾಲೆಗಳನ್ನ ಆರಂಭಿಸಲು ಅವಕಾಶ ನೀಡಲಾಗಿದೆ. ಹಾಜರಾತಿ ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ ಎಂಬುದನ್ನ ಸಚಿವರು ತಿಳಿಸಿದರು.


Spread the love

Leave a Reply

Your email address will not be published. Required fields are marked *

You may have missed