ನಿಲ್ಲದ ಕೊರೋನಾ ಹಾವಳಿ: ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಾವು…!

ವಿಜಯಪುರ: ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ವಲಯವೂ ತಲ್ಲಣಗೊಳ್ಳುವಂತಾಗಿದೆ. ದಿನವೊಂದಕ್ಕೆ ಒಂದಿಲ್ಲಾ ಒಂದು ಜಿಲ್ಲೆಯಲ್ಲಿ ಶಿಕ್ಷಕರು ಕೋವಿಡ್ ನಿಂದ ಸಾವಿಗೀಡಾಗುತ್ತಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ಶಿಕ್ಷಕ ಆರ್.ಎನ್.ಮುರಾಳ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಮುರಾಳ ಅವರು ಸಿಂದಗಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಕಳೆದ ಮೂರ್ನಾಲ್ಕು ದಿನದಿಂದ ಅನಾರೋಗ್ಯಗೊಂಡು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಮುರಾಳ ಅವರಿಗೆ ಕೊರೋನಾ ದೃಢಪಟ್ಟಿತ್ತು. ಇದಾದ ನಂತರ ಚಿಕಿತ್ಸೆ ಫಲಿಸದೇ ಶಿಕ್ಷಕ ಮುರಾಳ ಸಾವಿಗೀಡಾಗಿದ್ದಾರೆ.
ಶಿಕ್ಷಕ ಮುರಾಳ ಓರ್ವ ಸಂಘಟನಾ ಚತುರರಾಗಿದ್ದರು. ಅವರ ಸಾವು, ಶಿಕ್ಷಕ ವಲಯಕ್ಕೆ ತುಂಬಲಾರದ ನಷ್ಟವನ್ನ ಮಾಡಿದ್ದು, ಅವರ ಕುಟುಂಬಕ್ಕೆ ಈ ನೋವನ್ನ ಭರಿಸುವಂತ ಶಕ್ತಿಯನ್ನ ಭಗವಂತ ನೀಡಲಿ ಎಂದು ಶಿಕ್ಷಕ ಸಮೂಹ ಪ್ರಾರ್ಥಿಸಿದೆ.