ಶಾಲೆ ಆರಂಭ ಸಧ್ಯಕ್ಕಿಲ್ಲ: ಅಕ್ಟೋಬರ್ 15ರ ವರೆಗೆ ಭೇಟಿಯೂ ಮಾಡುವಂಗಿಲ್ಲ- ಹೊಸ ಆದೇಶ
1 min readಬೆಂಗಳೂರು: ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದ್ದು, ಅಕ್ಟೋಬರ್ 15ರ ವರೆಗೆ ವಿದ್ಯಾರ್ಥಿಗಳು ಶಾಲೆಗೂ ಭೇಟಿ ನೀಡುವಂತಿಲ್ಲ ಎಂದು ಹೊಸ ಆದೇಶವನ್ನ ಹೊರಡಿಸಿದೆ.
ಒಂಬತ್ತನೇಯ ತರಗತಿಯಿಂದ12 ನೇ ತರಗತಿವರೆಗೆ ಸಂದೇಹ ಪರಿಹಾರಕ್ಕಾಗಿಯೂ ಶಾಲೆಗಳಿಗೆ ಬರಯವಂತಿಲ್ಲವೆಂದು ಆದೇಶ ಹೊರಡಿಸಲಾಗಿದೆ. ಈ ಮೊದಲು ಶಿಕ್ಷಕರನ್ನ ಭೇಟಿಯಾಗಿ ಸಂದೇಹ ಪರಿಹಾರಕ್ಕಾಗಿ ಅನುಮತಿ ಕೊಡಲಾಗಿತ್ತು.
ಕೊರೋನಾ ಹೆಚ್ಚುತ್ತಿರುವುದರಿಂದ ಹೊಸ ಆದೇಶವನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿದ್ದಾರೆ.