ನಮ್ಗ್ ಜಾಗಾ ಇಲ್ಲಾ: ಶಾಲೀ ಶುರು ಮಾಡ್ರೀ: ಎಸ್ಡಿಎಂಸಿಯಿಂದ ಆಯುಕ್ತರಿಗೆ ಮನವಿ
ಧಾರವಾಡ: ವಿದ್ಯಾಗಮ ಯೋಜನೆ ಜಾರಿಗೆ ತಂದಿರುವ ಸರಕಾರದ ಕ್ರಮ ಕೆಲವೆಡೆ ತೊಂದರೆಯನ್ನೂ ಸೃಷ್ಟಿಸುತ್ತಿದೆ. ಹೀಗಾಗಿಯೇ ಎಸ್ಡಿಎಂಸಿಯವರೇ ಶಾಲೆಯನ್ನ ಆರಂಭಿಸುವಂತೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಧಾರವಾಡದ ಕಂಠಿಗಲ್ಲಿಯ ಎಸ್ಡಿಎಂಸಿ ಅಧ್ಯಕ್ಷ ಕೆ.ಜೆ.ಹಳ್ಯಾಳ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಶಿಕ್ಷಕರು ಮನೆ ಮನೆಗೆ ಹೋಗಿ ಪಾಠಗಳನ್ನ ವಿದ್ಯಾಗಮ ಯೋಜನೆಯ ಮೂಲಕ ಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಸಣ್ಣಪುಟ್ಟ ಮನೆಗಳು ಇರುವುದರಿಂದ ಮತ್ತಷ್ಟು ತೊಂದರೆ ಆಗುತ್ತಿದೆ. ಯಾವ ಮನೆಯಲ್ಲಿ ಯಾವ ಕಾಯಿಲೆಯಿದ್ದವರು ಇರುತ್ತಾರೋ ಗೊತ್ತಿಲ್ಲದೇ ಪಾಠ ಮಾಡುತ್ತಿದ್ದಾರೆಂದು ಆಯುಕ್ತರಿಗೆ ತಿಳಿಸಿದ್ದಾರೆ.
ಕಂಠಿಗಲ್ಲಿಯಲ್ಲಿ ಯಾವುದೇ ಖಾಲಿ ಜಾಗಗಳು ಇಲ್ಲ. ದೇವಸ್ಥಾನಗಳು ಇಲ್ಲ. ಹೀಗಾಗಿ ಶಾಲೆಯನ್ನು ಆರಂಭಿಸಿ, ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.
ವಿದ್ಯಾಗಮ ಯೋಜನೆ ಯಾವ ಥರದ ಸಂಕಷ್ಟ ಅನುಭವಿಸುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.