ಡಿಸೆಂಬರನಲ್ಲಾದರೂ ಶಾಲೆ ಆರಂಭಿಸಿ: ಬಸವರಾಜ ಹೊರಟ್ಟಿ ಒತ್ತಾಯ_ ಡಿಸೆಂಬರ್ 5ರಿಂದ ಹೋರಾಟಕ್ಕೆ ಸಿದ್ಧತೆ

ಉತ್ತರಕನ್ನಡ: ಶಾಲೆಗಳಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರ ನಡುವಿನ ಸಂಬಂಧ ತಪ್ಪಲು ಅವಕಾಶ ಸರಕಾರ ಅವಕಾಶ ನೀಡಬಾರದು. ಡಿಸೆಂಬರ್ ತಿಂಗಳಲ್ಲಿ ಶಾಲೆ ಪ್ರಾರಂಭ ಮಾಡುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕುಮಟಾದಲ್ಲಿ ಮಾತನಾಡಿರುವ ಹೊರಟ್ಟಿಯವರು, ಮಕ್ಕಳ ಹಿತದೃಷ್ಟಿಯಿಂದ 8ನೇ ತರಗತಿವರೆಗಿನ ಮಕ್ಕಳನ್ನ ಹೊರತುಪಡಿಸಿ 9 ಮತ್ತು 10ನೇ ತರಗತಿವರೆಗೆ ಶಿಕ್ಷಣ ಆರಂಭಿಸಬೇಕೆಂದು ಸರಕಾರವನ್ನ ಒತ್ತಾಯಿಸಿದರು.
ಸರಕಾರ ಕೋವಿಡ್-19 ನೆಪ ಹೇಳಿಕೊಂಡು ಶಿಕ್ಷಣ ಇಲಾಖೆ ಗದಾಪ್ರಹಾರ ಮಾಡುತ್ತಿದೆ. ಶಾಲಾ ಫಲಿತಾಂಶ ಕಡಿಮೆಯಾದರೇ ಶಿಕ್ಷಕರ ಸಂಬಳ ಕಡಿತ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಅಸಮರ್ಪಕ ವರ್ಗಾವಣೆ ಸೇರಿದಂತೆ ನಿರ್ಣಯಗಳ ಮೂಲಕ ಶಿಕ್ಷಣ ಇಲಾಖೆಯನ್ನು ಗೊಂದಲದಲ್ಲಿ ಮುಳುಗಿಸಿಟ್ಟಿದೆ. ಈ ರೀತಿ ಗೊಂಡಲ ಮಾಡುವುದನ್ನ ಬಿಟ್ಟು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದರೇ, ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಗೊಂದಲದಲ್ಲಿ ತುಂಬಿರುವ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ಈ ಹೋರಾಟಕ್ಕೆ ಸರಕಾರ ಸ್ಪಂಧಿಸದಿದ್ದರೇ ಅಮರಾಣಂತ ಉಪವಾಸ ನಡೆಸಲು ಸಿದ್ಧನಿದ್ದೇನೆ. ಡಿಸೆಂಬರ್ 5ರಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ಹೊರಟ್ಟಿ ಹೇಳಿದರು.