ಮೊರಬ, ಹೆಬಸೂರಲ್ಲಿ ಸೋರುತ್ತಿವೆ ಶಾಲೆಗಳು: ಗ್ರಾಮೀಣ ಸಂಘ ಮಾಡಿಕೊಂಡಿದೆ ಮನವಿ…
ನವಲಗುಂದ: ತಾಲೂಕಿನ ಮೊರಬ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ಹೆಬಸೂರು ಶಾಲೆಗಳು ಸೋರುತ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಇಲ್ಲಿದೆ ನೋಡಿ ವೀಡಿಯೋ..
ಶಿಥಿಲಗೊಂಡ – ಸೊರುತ್ತಿರುವ ಶಾಲಾ ಕೊಠಡಿಗಳ ಸ್ಥಿತಿ ಗತಿ ಪರಿಶೀಲಿಸಲು ಗ್ರಾಮೀಣ ಶಿಕ್ಷಕರ ಸಂಘದ ಮನವಿ
ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಶಾಲಾ ಕಟ್ಟಡಗಳು ವಿಶೇಷವಾಗಿ ತರಗತಿ ಕೋಣೆಗಳ ಮೇಲ್ಛಾವಣಿಗಳು ಸೋರುತ್ತಿದ್ದು ಮತ್ತು ಕೆಲವು ಕಟ್ಟಡಗಳು ಸಿಥಿಲಗೊಂಡಿದ್ದು ಇಂಥ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಎಸ್.ಡಿ.ಎಮ್.ಸಿ.ಪದಾಧಿಕಾರಿಗಳು ನಿತ್ಯದ ಎಲ್ಲ ಚಟುವಟಿಕೆಗಳನ್ನು ಬದಿಗಿಟ್ಟು ಖುದ್ದಾಗಿ ಪರಿಶೀಲಿಸಿ ಫೋಟೋ ವಿಡಿಯೋ ಸಹಿತ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಹಾಗೂ ಕಂದಾಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳಿಗೆ ಲಿಖಿತ ವರದಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು.
ಅಪಾಯಕಾರಿ ಕೊಠಡಿಗಳಿದ್ದರೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಿರಿ ಈಗಾಗಲೇ ಉನ್ನತ ಹಂತದ ಅಧಿಕಾರಿಗಳು ನೀಡಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸೋಣ.
ಯಾರೂ ಮೈಮರೆಯದೆ ಮಕ್ಕಳ ಹಿತ ರಕ್ಷಣೆ ಮಾಡೋಣ ಎಂದು ಮತ್ತು ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಶಾಲಾ ಕಟ್ಟಡಗಳನ್ನು ಪರಿಶೀಲಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮನವಿ ಮಾಡಿದ್ದಾರೆ.