ಧಾರವಾಡ: ಬಂದ್ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಿದ ಡಿಡಿಪಿಐ ಕೆಳದಿಮಠ….!!!
ಧಾರವಾಡ: ಕೇಂದ್ರದ ಗೃಹ ಸಚಿವ ಅಮಿತ ಶಾ ಅವರ ಹೇಳಿಕೆಯನ್ನ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಹುಬ್ಬಳ್ಳಿ-ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವ ಬಗ್ಗೆ ಗೊತ್ತಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಹೊರಡಿಸಿರುವ ಆದೇಶದ ಮಾಹಿತಿ ಶಾಲೆಗಳ ಪ್ರಾಶುಂಪಾಲರು, ತಮ್ಮ ಶಾಲೆಯ ಗ್ರೂಫ್‌ಗಳಿಗೆ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಾಹಿತಿ ಇಂತಿದೆ…
ದಿನಾಂಕ 9.1.2024 ರಂದು ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಅಂದಿನ ದಿವಸ ಶಾಲೆಗಳಿಗೆ ರಜೆ ನೀಡಿ, ಮುಂಬರುವ 2 ಶನಿವಾರಗಳಂದು ಪೂರ್ಣಾವಧಿ ಶಾಲೆಯನ್ನು ನಡೆಸಿ ರಜೆ ಅವಧಿಯನ್ನು ಸರಿದೂಗಿಸಲು ಸಂಬಂಧಿಸಿದ BEOರವರಿಗೆ ಸೂಚಿಸಿದೆ. ಡಿಡಿಪಿಐ.
ಬಂದ್ ಹಿನ್ನೆಲೆಯಲ್ಲಿ ರಜೆ ಘೋಷಣೆಯಾಗಿದ್ದರಿಂದ ಮುಂದಿನ ಎರಡು ಶನಿವಾರ ಪೂರ್ಣವಾಗಿ ಶಾಲೆಗಳನ್ನ ನಡೆಸುವಂತೆಯೂ ಸೂಚಿಸಿದ್ದಾರೆ.