ಕೊರೋನಾ ನಿಲ್ಲೋವರೆಗೋ ಶಾಲೆ ಓಪನ್ ಮಾಡಬಾರದು: ಶಾಲೆ ಓಪನ್ ಮಾಡಿದ್ರೇ ಭಾರಿ ಅನಾಹುತ ಆಗುತ್ತೆ: ಬಸವರಾಜ ಹೊರಟ್ಟಿ ಎಚ್ಚರಿಕೆ

ಬೆಂಗಳೂರು: ಕೊರೋನಾ ನಿಲ್ಲೋವರೆಗೋ ಶಾಲೆ ಓಪನ್ ಮಾಡಬಾರದು. ಶಾಲೆ ಓಪನ್ ಮಾಡಿದ್ರೇ ಭಾರಿ ಅನಾಹುತ ಆಗುತ್ತೆ. ಎಂಟನೇ ತರಗತಿವರೆಗಂತೂ ಮಾಡಲೇಬಾರದು. ಮಕ್ಕಳು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಸರಿಯಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಝೀರೋ ಆಗೋವರೆಗೂ ಶಾಲೆ ಓಪನ್ ಮಾಡಲೇಬಾರದು ಅನ್ನೋದು ನನ್ನ ಅಭಿಪ್ರಾಯ. ಅಧಿಕಾರಿಗಳ ಮಾತು ಜಾಸ್ತಿ ಕೇಳಿ, ಆತುರಪಟ್ಟು ಶಾಲೆ ಓಪನ್ ಮಾಡಬಾರದು. ದಸರಾ ರಜೆ, ಹಬ್ಬದ ರಜೆ, ಶನಿವಾರ ಪೂರ್ತಿ ಶಾಲೆ ಹಾಗೂ ಪಠ್ಯ ಕಡಿತಕ್ಕೂ ಅವಕಾಶ ಇದೆ. ಈ ವರ್ಷ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋಬೇಕು. ಹೀಗಾಗಿ ಕೊರೋನಾ ಮುಗಿಯೋವರೆಗೂ ಶಾಲೆ ತೆರೆಯೋದು ಬೇಡ ಎಂದು ಹೊರಟ್ಟಿ ಹೇಳಿದರು.