ಶಿಕ್ಷಕರ ದಿನಾಚರಣೆಯಂದೇ ಶಾಲೆಗಳು ಆರಂಭ: ಹೊಸ ಮನ್ವಂತರಕ್ಕೆ ನಾಂದಿ
ಅಮರಾವತಿ: ಕೊರೋನಾ ಹಾವಳಿ ಮುಂದುವರೆದಿದ್ದರೂ ಶಿಕ್ಷಕರ ದಿನಾಚರಣೆಯಾದ ಸೆಪ್ಟಂಬರ್ ಐದರಂದು ಶಾಲೆಗಳನ್ನ ಮತ್ತೆ ಆರಂಭಿಸಬೇಕೆಂದು ಆಂದ್ರಪ್ರದೇಶ ಸರಕಾರ ಯೋಜನೆ ಹಾಕಿಕೊಂಡಿದೆ.
ಮುಖ್ಯಮಂತ್ರಿ ವೈ.ಎಸ್.ಜಗನಮೋಹನ ರೆಡ್ಡಿ, ಶಿಕ್ಷಣ ಸಚಿವ ಎ.ಸುರೇಶ ನೇತೃತ್ವದಲ್ಲಿ ಸಭೆಯನ್ನ ನಡೆಸಿ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ಮುಂದಿನ ತಿಂಗಳ ಪರಿಸ್ಥಿತಿಯನ್ನ ಅವಲೋಕನ ಮಾಡಿ ನಂತರ ಒಮ್ಮತದ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಮಧ್ಯಾಹ್ನದ ಊಟದ ಬದಲಾಗಿ ವಿದ್ಯಾರ್ಥಿಗಳ ಮನೆಗೆ ದವಸ, ಧಾನ್ಯ ವಿತರಣೆಯನ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ ಹುದ್ದೆಯನ್ನ ರಚಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎ.ಸುರೇಶ ಮಾಹಿತಿ ನೀಡಿದ್ದಾರೆ.