ದೈ.ಶಿಕ್ಷಕ ಎಸ್.ಬಿ.ಬಸಾಪುರ ಡೆಪ್ಟೇಟೇಶನ್ ಕ್ಯಾನ್ಸಲ್: ಆದೇಶ ಮಾಡಿ ಕಚೇರಿಯಲ್ಲೇ ಬಚ್ಚಿಟ್ಟ “ಡಿಡಿಪಿಐ ಕೆಳದಿಮಠ”…
1 min readಧಾರವಾಡ: ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸವನ್ನ ಬಹಳಷ್ಟು ಸೊಗಸಾಗಿ ಮಾಡುತ್ತಿದ್ದಾರೆಂಬ ದೂರುಗಳಿಗೆ ಸತ್ಯವೊಂದು ಸಾಕ್ಷಿ ಸಮೇತ ವೈರಲ್ ಆಗಿದೆ.
ಧಾರವಾಡ ತಾಲೂಕಿನ ನವಲೂರ ಗ್ರಾಮದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ.ಬಸಾಪೂರ ಅವರನ್ನ ಇಲ್ಲದ ಪೋಸ್ಟ್ ಕ್ರಿಯೇಟ್ ಮಾಡಿ, ಧಾರವಾಡ ಶಹರದ ದೈಹಿಕ ಶಿಕ್ಷಣ ಪರಿವೀಕ್ಷಕ ಎಂದು ಡೆಪ್ಟೇಟೇಷನ್ ಮಾಡಲಾಗಿತ್ತು. ಬಸಾಪೂರ ಸ್ಥಳಕ್ಕೆ ಹುಬ್ಬಳ್ಳಿ ನೇಕಾರನಗರದ ಪ್ರೌಢಶಾಲೆಯಿಂದ ಎಸ್.ಎಂ.ದೊಡ್ಡವಾಡ ಎಂಬುವವರನ್ನ ಡೆಪ್ಟೇಟೇಷನ್ ಮಾಡಲಾಗಿತ್ತು.
ನೇಕಾರನಗರದ ಶಾಲೆಯಲ್ಲಿ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಬಗ್ಗೆಯೂ ಕ್ರಾಸ್ ಡೆಪ್ಟೇಟೇಷನ್ ನಡೆಯುತ್ತಿರುವ ಬಗ್ಗೆಯೂ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಮಾಹಿತಿಯನ್ನ ಹೊರಗೆ ಹಾಕಿತ್ತು. ಆಗ ತಮ್ಮ ಬುದ್ಧಿಯನ್ನ ಉಪಯೋಗಿಸಿ, ಎರಡು ಆದೇಶಗಳನ್ನ ಮಾಡಿ, ಬಸಾಪೂರ ಅವರನ್ನ ನವಲೂರ ಶಾಲೆಗೂ, ದೊಡ್ಡವಾಡ ಅವರನ್ನ ನೇಕಾರನಗರದ ಶಾಲೆಗೆ ಮರಳಿ ಆದೇಶ ಮಾಡಿದರು.
ಸೋಜಿಗವೆಂದರೇ, ಕೇವಲ ಎಸ್.ಎಂ.ದೊಡ್ಡವಾಡ ಅವರ ಆದೇಶ ಪ್ರತಿ ಧಾರವಾಡ ಬಿಇಓ ಕಚೇರಿಗೆ ತಲುಪಿದೆ. ಸೆಪ್ಟೆಂಬರ್ 12 ರಂದು ‘ಬಸಾಪುರ’ ಆದೇಶ ಪ್ರತಿ ಡಿಡಿಪಿಐ ಕಚೇರಿಯಲ್ಲಿ ಕೊಳೆಯುತ್ತಿದೆ. ಇನ್ನೂ ಅಚ್ಚರಿ ಪಡುವ ಸಂಗತಿಯಂದರೇ, ಆದೇಶ ನೀಡಿದ ನಂತರ ರಿಲೀವ್ ಆಗಿಲ್ಲವೆಂದು ಎಸ್.ಎಂ.ದೊಡ್ಡವಾಡ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗತ್ತೆ. ಬಸಾಪುರ ಅವರ ಆದೇಶ ಹೊರಗೆ ಹೋಗೋದೆ ಇಲ್ಲ.
ಇಂತಿಪ್ಪಾ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಧಾರವಾಡ ಜಿಲ್ಲೆಯ ಶಿಕ್ಷಣ ಮತ್ತೂ ಶಿಕ್ಷಕರ ಮನಸ್ಥಿತಿಯನ್ನ ಮೂರಾಬಟ್ಟೆ ಮಾಡಲು ಮುಂದಾಗಿದ್ದಾರೆಂಬ ಅಂಶ ಈ ಮೂಲಕ ಗೊತ್ತಾಗತ್ತೆ. ವಿದ್ಯಾನಗರಿ ಧಾರವಾಡ ಇಂಥವರನ್ನ ಇನ್ನೂ ಸಹಿಸಿಕೊಂಡು ಹೋಗುತ್ತಿರುವುದು ತೀರಾ ಅಚ್ಚರಿಯಾಗಿದೆ.