ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಇನ್ನೂ30ದಿನ ದರ್ಶನ ಭಾಗ್ಯವಿಲ್ಲ.

ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದರ್ಶನವನ್ನ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಉತ್ತರ ಕರ್ನಾಟಕದ ಶಕ್ತಿ ಪೀಠವಾಗಿರುವ ಶ್ರೀ ಯಲ್ಲಮ್ಮ ದೇವಿಯ ದರ್ಶನ ಈ ತಿಂಗಳಿಂದ ಸಿಗಬಹುದೆಂದುಕೊಂಡಿದ್ದ ಭಕ್ತರಿಗೆ ಈ ಆದೇಶದಿಂದ ನಿರಾಸೆಯಾಗಿದ್ದು, ಕೇಂದ್ರದ ಲಾಕ್ ಡೌನ್ ಮಾರ್ಗಸೂಚಿ 5.0 ಬಿಡುಗಡೆಗೊಂಡ ನಂತರವೂ ಇಂತಹ ಆದೇಶ ಹೊರ ಬಂದಿದೆ.
ಕೊರೋನಾ ವೈರಸ್ ಹಾವಳಿಯಿಂದ ಕಳೆದ ಹಲವು ತಿಂಗಳುಗಳಿಂದ ಯಲ್ಲಮ್ಮ ದೇವಿಯ ದರ್ಶನವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಪ್ರಮುಖವಾದ ಹುಣ್ಣಿಮೆಯ ಸಮಯದಲ್ಲೂ ಭಕ್ತರಿಗೆ ದರ್ಶನದ ಅವಕಾಶವನ್ನ ನೀಡಿಲ್ಲ.
ಹೊಸ ಮಾರ್ಗಸೂಚಿ ಬಂದ ನಂತರ ಯಲ್ಲಮ್ಮದೇವಿಯ ದರ್ಶನದ ಅವಕಾಶ ಸಿಗಬಹುದೆಂದು ಅಂದುಕೊಂಡಿದ್ದವರಿಗೆ ಜಿಲ್ಲಾಧಿಕಾರಿಗಳ ಆದೇಶ ನಿರಾಸೆಯನ್ನ ಮೂಡಿಸಿದ್ದಂತೂ ಸತ್ಯ.