ಮಾಜಿ ಸಚಿವರಿಂದ ಆಡೀಯೋ ರಿಲೀಸ್: ಸಿಎಂ ಸಂಬಂಧಿಕರೂ ಹಗರಣದಲ್ಲಿ ಭಾಗಿ

ಮೈಸೂರು: ಮೈಮುಲ್ ಸಿಬ್ಬಂದಿ ಆಯ್ಕೆಯಲ್ಲಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡರ ಅಕ್ಕನ ಮಗ ಹಾಗೂ ತಮ್ಮನ ಮಗ ಆಯ್ಕೆಯಾಗಿದೆ. ಮನೋಜ್ ಹಾಗೂ ಶಿವಣ್ಣ ಹೆಸರು ಐದನೇ ಒಂದು ಆಯ್ಕೆಯಲ್ಲಿ ಹೆಸರಿದೆ. ಈ ಆಯ್ಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಆಯ್ಕೆ ಮಾಡಲು ಹಣ ಕೋಡೋ ವಿಚಾರದ ಸಂಭಾಷಣೆ ಆಡಿಯೋ ರಿಲೀಸ್. ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಸ್ಫೋಟಕ ಆಡಿಯೋ ಬಿಡುಗಡೆ.
ಇದು ಜಸ್ಟ್ ಪ್ರೋಮೋ. ಮುಂದೆ ಭಾರಿ ದೊಡ್ಡವರ ಆಡಿಯೋ ಬಿಡುಗಡೆ ಮಾಡ್ತೀನಿ. ಮೂರು ಆಡಿಯೋ ಸುರುಳಿ ಬಿಡುಗಡೆ. ನಾಮ ನಿರ್ದೇಶಕರ ಜೊತೆ ಆಯ್ಕೆ ಆದ ಹಾಗೂ ಆಯ್ಕೆ ಆಗದ ಅಭ್ಯರ್ಥಿಗಳ ನಡುವೆ ಜೊತೆ ಹಣ ಕೋಡೋ ವಿಚಾರ ಚರ್ಚೆ. ಯಾರು ಅತಿ ಹೆಚ್ಚು ಹಣ ನೀಡ್ತಾರೋ ಅವರಿಗೆ ಹುದ್ದೆ. ಮೈಮುಲ್ ನಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಸಂಬಂಧಿಕರು ನೇರವಾಗಿ ಭಾಗಿ. ಆರೋಪ ಸಿಎಂ ಮೇಲೆ ಬಂದಿರುವ ಕಾರಣ ತನಿಖೆ ಆಗಬೇಕು. ಆಯ್ಕೆ ಪ್ರಕ್ರಿಯೆ ನಿಲ್ಲದಿದ್ರೆ ಮೆಗಾ ಡೈರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸಾರಾ ಮಹೇಶ್ ಒತ್ತಾಯಿಸಿದ್ದಾರೆ.