Posts Slider

Karnataka Voice

Latest Kannada News

ಇರಾನಿ ಗ್ಯಾಂಗ್ ಪತ್ತೆ: 85 ಲಕ್ಷದ ಚಿನ್ನಾಭರಣ ವಶ- ಬೆಚ್ಚಿಬೀಳಿಸಿದ್ದ ಸರಗಳ್ಳರ ತಂಡ

1 min read
Spread the love

ಬೆಂಗಳೂರು: ರಾಜಧಾನಿಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಹಿಳೆಯರು, ವೃದ್ಧರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಟೋರಿಯಸ್ ಇರಾನಿ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಅಪಾರ ಪ್ರಮಾಣದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ತನಿಖೆ ನಡೆಸಿದ್ದ ಪೊಲೀಸರ ಬಲೆಗೆ ಗುಲಬರ್ಗಾ ರೇಲ್ವೇ ಸ್ಟೇಷನ್ ಹತ್ತಿರದ ಹುಸೇನಲಿ ಅಲಿಯಾಸ್ ಅಜಮಲಿ, ಮಧ್ಯಪ್ರದೇಶ ಸಂಜಯನಗರದ ಅಬುಹೈದರ ಅಲಿಯಾಸ್ ಹಾಜಿ ಅಲಿ, ಮೆಹದಿ ಹಸನ್ ಅಲಿಯಾಸ್ ರಾವತ್ ಅಲಿ ಹಾಗೂ ಆಂದ್ರಪ್ರದೇಶ ಅನಂತಪುರದ ಸಾಧೀಕ ಅಲಿಯಾಸ್ ರಫೀಕ ಎಂಬುವವರು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಿಂದ 85ಲಕ್ಷ ರೂಪಾಯಿ ಮೌಲ್ಯದ 1.7 ಕೆಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, 30 ಸರಗಳ್ಳತನಗಳು ಪತ್ತೆಯಾಗಿವೆ.

ಪ್ರಮುಖವಾಗಿ ಮಹಿಳೆಯರು, ವೃದ್ಧರನ್ನ ನೋಡಿಕೊಂಡು ಕ್ಷಣಾರ್ಧದಲ್ಲೇ ಸರಗಳ್ಳತನ ಮಾಡುತ್ತಿದ್ದ ತಂಡವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸರಗಳ್ಳತನ ಮಾಡಿದ್ದ ಚಿನ್ನಾಭರಣಗಳನ್ನ ಗುಲಬರ್ಗಾದಲ್ಲಿಯೂ ವಿಲೇವಾರಿ ಮಾಡಿದ್ದರೆಂದು ತನಿಖೆಯ ವೇಳೆ ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *