ಗಾಂಧಿ ಜಯಂತಿಯಂದೇ ಹೋರಾಟಕ್ಕೆ ಮುಂದಾದ ಸಂತೋಷ ಲಾಡ

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ್ ಕಲಘಟಗಿ ಕ್ಷೇತ್ರಕ್ಕೆ ನಾಳೆ ಆಗಮಿಸಲಿದ್ದು, ಅದೇ ದಿನ ಕಿಸಾನ್ ಮಜ್ದೂರ ಬಚಾವೋ ದಿವಸ ಹಾಗೂ ಕಿಸಾನ್ ಮಜ್ದೂರ ಕಾಂಗ್ರೆಸ್ ಸಮಿತಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.
ಸಚಿವ ಸಂತೋಷ ಲಾಡ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅದೇ ದಿನ ಬೆಳಿಗ್ಗೆ 11-00 ಗಂಟೆಗೆ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ “ಕಿಸಾನ್ ಮಜ್ದೂರ್ ಬಚಾವೋ ದಿವಸ ” ಹಾಗೂ ಕಿಸಾನ್ ಮಜ್ದೂರ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯು ಕಲಘಟಗಿ APMCಯಿಂದ ತಹಶಿಲ್ದಾರರ ಕಛೇರಿ ವರೆಗೆ ಆಯೋಜನೆ ಮಾಡಲಾಗಿದ್ದು, ಇದರಲ್ಲಿಯೂ ಲಾಡ್ ಭಾಗವಹಿಸಲಿದ್ದಾರೆ.
ತಾಲೂಕಿನ ರೈತರ ಬೆಳೆಹಾನಿ, 2019ರ ಬೆಳೆ ವಿಮೆ ರೈತರಿಗೆ ಬಾರದೆ ಇರುವುದು, ಕೂಲಿ ಕಾರ್ಮಿಕರ, ವಯೋವೃದ್ದರ ವೃದ್ಯಾಪ ವೇತನ , ತಾಲೂಕಿನಲ್ಲಿ ಅಪಾರವಾದ ಮಳೆಯಿಂದ ಸಾಕಷ್ಟು ಮನೆಗಳು ಹಾನಿಯಾದರೂ ಪರಿಹಾರ ನೀಡದೇ ಇರುವುದನ್ನ ಖಂಡಿಸಿ ತಹಶೀಲ್ದಾರರ ಮೂಲಕ ಮನವಿ ಕೊಡುವ ಹೋರಾಟ ನಡೆಯಲಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಕಲಘಟಗಿ ತಾಲ್ಲೂಕಿನ ಸಮಸ್ತ ರೈತ ಮುಖಂಡರು, ತಾಲೂಕಿನ ವಿವಿದ ಸಂಘಟನೆಗಳ ಮುಖಂಡರು ಭಾಗವಹಿಸುವಂತೆ ಕೆಪಿಸಿಸಿ ಸದಸ್ಯ ಎಸ್. ಆರ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಪ್ರಧಾನ ಕಾರ್ಯದರ್ಶಿ ಹನಮಂತಪ್ಪ ಕಾಳಿ ತಿಳಿಸಿದ್ದಾರೆ.