ವ್ಹಾ.. ಸಂತೋಷ ಲಾಡ್..! ಸೋಲಿಸಿದವರ ಆರೋಗ್ಯ ವಿಚಾರಿಸಿದ ಸೊಂಡೂರ ಗಣಿಧಣಿ

ಧಾರವಾಡ: ರಾಜಕಾರಣದಲ್ಲಿ ಅಪರೂಪಕ್ಕೆಂಬಂತೆ ಒಂದಿಷ್ಟು ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಘಟನೆಯೊಂದು ಸದ್ದಿಲ್ಲದೇ ಕಲಘಟಗಿಯಲ್ಲಿ ನಡೆದದ್ದು, ರಾಜಕಾರಣ ಮುಖ್ಯವಲ್ಲ, ಮಾನವೀಯತೆ ಮುಖ್ಯ ಎಂಬುದನ್ನ ತೋರಿಸಿದ ಗಳಿಗೆಯದು. ನಡೆದದ್ದೇನು ಎಂಬುದನ್ನ ಪೂರ್ತಿಯಾಗಿ ಓದಿ ತಿಳಿಯಿರಿ.
ಸಂತೋಷ ಲಾಡ್.. ಮಾಜಿ ಸಚಿವ. ಬರೋಬ್ಬರಿ ವರ್ಷದ ನಂತರ ಕಲಘಟಗಿಗೆ ಎಂಟ್ರಿ ಕೊಟ್ಟರು. ಕೊಟ್ಟ ಕೆಲವೇ ಸಮಯದಲ್ಲಿ ಸೋಲಿನ ಆತ್ಮಾವಲೋಕನ ಮಾಡಿಕೊಂಡೆ ಎಂದು ಕಲಘಟಗಿಯತ್ತ ಮುಖ ಮಾಡಿದ್ರು. ಅಲ್ಲಿಂದ ಮಾಜಿ ಸಚಿವ ಸಂತೋಷ ಲಾಡ್ ಎಲ್ಲಿಗೆ ಹೋದ್ರು ಗೊತ್ತಾ.. ಅಚ್ಚರಿಯಾಗಬೇಡಿ.. ಯಾವ ಸೋಲಿನ ಬಗ್ಗೆ ಎರಡು ವರ್ಷ ಆತ್ಮಾವಲೋಕನ ಮಾಡಿಕೊಂಡರೋ, ಅದೇ ಸೋಲನ್ನ ನೀಡಿದ ಹಾಲಿ ಶಾಸಕ ಸಿ.ಎಂ.ನಿಂಬಣ್ಣನವರ ನೋಡಲು.
ಹೌದು.. ದೇವಿಕೊಪ್ಪ ಐಬಿಗೆ ಹಾಲಿ ಶಾಸಕರನ್ನ ನೋಡಲು ಸಂತೋಷ ಲಾಡ ಹೋದರು. ಕೊರೋನಾದಿಂದ ಗುಣಮುಖರಾಗಿ ರೆಸ್ಟ್ ಪಡೆದುಕೊಳ್ಳುತ್ತಿರುವ ನಿಂಬಣ್ಣನವರ ಜೊತೆ ಉಭಯ ಕುಶಲೋಪರಿ ನಡೆಸಿದರು. ಬರುವಾಗ ಚೆನ್ನಾಗಿರಿ ಸರ್ ಎಂದು ಕೈ ಮುಗಿದು ಹೊರಟು ಬಂದರು.
ಇದೇ ಅಲ್ಲವೇ ಮಾನವೀಯತೆ. ಸಂತೋಷ ಲಾಡ್ ಈ ವಿಷಯದಲ್ಲಿ ಚೆನ್ನಾಗಿಯೇ ನಡೆದುಕೊಂಡರು. ರಾಜಕೀಯ ಮಾಡುವವರ ನಡುವೆ ಮನುಷ್ಯತ್ವಕ್ಕೆ ಬೆಲೆ ಕೊಡಬೇಕು ಎನ್ನುವವರು ಹೀಗೆ ಇರುತ್ತಾರಲ್ವಾ..! ವ್ಹಾ.. ಸಂತೋಷ ಲಾಡ್..!