ಕಿಟ್ ಕೊಟ್ಟು ಪೋಟೊ ಹೊಡಿಸ್ಕೋಳದ್ದಕ್ಕೆ ನಾಚ್ಗಿಯಾಗತ್ತೆ ನಂಗೆ- ಕಣ್ಣೀರು ಹಾಕಿದ ಸಂತೋಷ ಲಾಡ…!

ಕಲಘಟಗಿ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಕ್ಕಿ ಕೊಟ್ಟು ಪೋಟೊ ಹೊಡೆಸಿಕೊಳ್ಳುವ ಸ್ಥಿತಿ ಬಂದಿರುವುದಕ್ಕೆ ನನ್ನ ಮನಸ್ಸಿಗೆ ತೀವ್ರ ಬೇಸರವಾಗಿದೆ. ನನ್ನ ಬಗ್ಗೆ ನಂಗೆ ಅಸಹ್ಯವಾಗುತ್ತದೆ ಎಂದು ಮಾಜಿ ಸಂತೋಷ ಲಾಡ ಹೇಳಿದರು.
ಕಲಘಟಗಿ ತಾಲೂಕಿನ ಕೂಡ್ಲಗಿ ಗ್ರಾಮದಲ್ಲಿ ಅಕ್ಕಿ ಕಿಟ್ ವಿತರಣೆ ಮಾಡುವಲ್ಲಿ ಗದ್ಗಿತರಾದ ಸಂತೋಷ ಲಾಡ್, ತಾವು ಮಾಡುತ್ತಿರುವ ಕೆಲಸ ಯಾರಿಗೂ ಗೊತ್ತಾಗದ ಹಾಗೇ ನಡೆಯಬೇಕೆಂದರು.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಮಾಜಿ ಸಚಿವ ಸಂತೋಷ ಲಾಡ ಕಲಘಟಗಿ ಕ್ಷೇತ್ರದಲ್ಲಿ ಸಾವಿರಾರೂ ರೈತರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರೂ ಅದನ್ನ ಎಂದೂ ಕೂಡಾ ಯಾರಿಗೂ ಹೇಳಿಲ್ಲ. ಬಹುತೇಕ ಜನರಿಗೆ ಸಹಾಯ ಮಾಡಿದರೂ, ಕೂಡಾ ಅದನ್ನ ಮತ್ತೊಬ್ಬರಿಗೆ ತಿಳಿಯದ ಹಾಗೇ ನೋಡಿಕೊಂಡು ಬರುತ್ತಿದ್ದಾರೆ.