ಸಂತೋಷ ಲಾಡ ಎಚ್ಚರಿಕೆ ಮುನ್ನವೇ ಎಚ್ಚೆತ್ತ ಶಾಸಕ ನಿಂಬಣ್ಣನವರ
1 min readಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅಧಿಕಾರದ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಬಸ್ ಡೀಪೊ ಉದ್ಘಾಟನೆ ಮಾಡದೇ ಹೋದಲ್ಲಿ ಜನರನ್ನ ಕರೆದುಕೊಂಡು ಹೋರಾಟ ಮಾಡುವ ಸ್ಥಿತಿ ಬರತ್ತೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ ಎಚ್ಚೆತ್ತು ಡೀಪೊ ಉದ್ಘಾಟನೆ ಮುಂದಾಗಿದ್ದಾರೆ.
ಸಂತೋಷ ಲಾಡ ಹೇಳಿಕೆ ಇಲ್ಲಿದೆ ನೋಡಿ..
ನಾಳೆ ಕಲಘಟಗಿ ಪಟ್ಟಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಡೀಪೊ ಆಗಲು ಕಾರಣರಾದವರನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಂತೋಷ ಲಾಡ ಅವರು ಮಂತ್ರಿಗಳಿದ್ದ ಸಮಯದಲ್ಲಿ ಆಸಕ್ತಿವಹಿಸಿ ಡೀಪೊ ನಿರ್ಮಾಣಕ್ಕೆ ಮುಂದಾಗಿದ್ದರು.
5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಡೀಪೊ ಉದ್ಘಾಟನೆಗೆ ಮೀನ ಮೇಷ ಎಣಿಸಲಾಗುತ್ತಿದೆ ಎಂದು ಕಲಘಟಗಿ ಜನರ ಅಭಿಪ್ರಾಯದಿಂದ, ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಂತೋಷ ಲಾಡ ಅವರು, ಉದ್ಘಾಟನೆ ಮಾಡದೇ ಹೋದಲ್ಲಿ ಹೋರಾಟದ ದಾರಿ ಹಿಡಿಯಬೇಕಾಗತ್ತೆ ಎಂದಿದ್ದರು.
ಮಾಜಿ ಸಚಿವರು ಹೋರಾಟದ ಹಾದಿ ಹಿಡಿಯುವ ಮುನ್ನವೇ ಎಚ್ಚೆತ್ತ ಶಾಸಕ ನಿಂಬಣ್ಣನವರ ಡೀಪೊ ಉದ್ಘಾಟನೆಗೆ ಮುಂದಾಗಿದ್ದಾರೆ. ಆದರೆ, ಕೆಲಸ ಮಾಡಿದವರನ್ನ ಮರೆತು ಕ್ಷೇತ್ರದ ಜನರ ಮನದಿಂದ ದೂರವುಳಿದಿದ್ದಾರೆ. ಡೀಪೊ ಆಗಲು ಕಾರಣಿಕರ್ತರಾದವರನ್ನ ಹಾಲಿ ಶಾಸಕರು ಮರೆಯಬಾರದಿತ್ತು. ಎಲ್ಲದರಲ್ಲೂ ರಾಜಕೀಯ ಮಾಡಬಾರದೆಂದು ಜನರು ಹೇಳುತ್ತಿದ್ದಾರೆ.