ನಿವೃತ್ತರ ಪಿಂಚಣಿ ಹಣ ಬಿಡದವರು ನೀವು: ಕಾಂಗ್ರೆಸ್ ಗೆ ಸಂತೋಷ ಚವ್ಹಾಣ ತರಾಟೆ
ಹುಬ್ಬಳ್ಳಿ: ನಿಮ್ಮ ಸರಕಾರವಿದ್ದಾಗ ಯಾವುದೇ ಅಭಿವೃದ್ದಿ ಮಾಡಿಲ್ಲ. ನಿವೃತ್ತರ ಪಿಂಚಣಿಯ ಹಣವನ್ನ ಬಿಟ್ಟಿಲ್ಲ ನೀವು. ಇಂತಹದರಲ್ಲಿ ಬಿಜೆಪಿಯ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆಯಿದೆ ಎಂದು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಸುಖಾಸುಮ್ಮನೆ ಬಿಜೆಪಿ ಬಗ್ಗೆ ಸುಳ್ಳು ಆರೋಪಗಳನ್ನ ಮಾಡುತ್ತಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವಳಿನಗರದಲ್ಲಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಅದು ಕಾಂಗ್ರೆಸ್ ಗೆ ಕಾಣುತ್ತಿಲ್ಲವೇ ಎಂದು ಸಂತೋಷ ಚವ್ಹಾಣ ಪ್ರಶ್ನಿಸಿದ್ದಾರೆ.
ಕೇಂದ್ರ ರಸ್ತೆ ನಿಧಿ ಯೋಜನೆಯಡಿ 430 ಕೋಟಿ ರೂಪಾಯಿಯ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿವೆ. ನಗರೋತ್ಥಾನ ಯೋಜನೆಯಡಿಯೂ ಹಲವು ಕಾಮಗಾರಿಗಳು ಆರಂಭಗೊಂಡಿವೆ. ಇವ್ಯಾವು ಕಾಂಗ್ರೆಸ್ಸಿನ ಜನರಿಗೆ ಕಾಣುತ್ತಿಲ್ಲವೇ ಎಂದು ಚವ್ಹಾಣ ಪ್ರಶ್ನಿಸಿದ್ದಾರೆ.
ಕೊರೋನಾ ಸಮಯದಲ್ಲೂ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಆಡಳಿತ ನಡೆಯುತ್ತಿರುವುದನ್ನ ಸಹಿಸಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ಹಾಗಾಗಿಯೇ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಲು ಮುಂದಾಗುತ್ತಿದೆ ಎಂದು ಸಂತೋಷ ಚವ್ಹಾಣ ಆಕ್ರೋಶವ್ಯಕ್ತಪಡಿಸಿದ್ದಾರೆ.