ಸಂಗೊಳ್ಳಿ ರಾಯಣ್ಣನನ್ನೇ ಟಾರ್ಗೆಟ್ ಮಾಡ್ತಿರೋದು ಯಾಕೆ: ಮತ್ತೆ ಅಗೌರವ

ವಿಜಯಪುರ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕಟೌಟ್ಗೆ ದುಷ್ಕರ್ಮಿಗಳು ಕೆಸರು ಎರಚಿ ಅಪಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ.
ಹಂಜಗಿಯಲ್ಲಿ ಏನು ನಡೆಯುತ್ತಿದೆ ಎಂಬುದರ ವೀಡಿಯೋ
ಹಂಜಗಿ ಗ್ರಾಮದ ರಾಯಣ್ಣ ಸರ್ಕಲ್ನಲ್ಕಿರುವ ಬೃಹತ್ ಕಟೌಟ್ ಗೆ ದುಷ್ಕರ್ಮಿಗಳು ಕೆಸರು ಎರಚಿದ್ದಾರೆ. ಇನ್ನು ಕಟೌಟನಲ್ಲಿರೋ ಭಕ್ತ ಕನಕದಾಸರು, ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೂ ಕಿಡಿಗೇಡಿಗಳು ಕೆಸರು ಹಚ್ಚಿದ್ದಾರೆ. ಈ ಅಪಮಾನ ಖಂಡಿಸಿ ಹಂಜಗಿ ಗ್ರಾಮಸ್ಥರು ರಾಯಣ್ಣನ ಕಟೌಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರ ಭೇಟಿ ಸಂಗೊಳ್ಳಿ ರಾಯಣ್ಣ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಕೆಸರು ಸ್ವಚ್ಛಗೊಳಿಸಿದರು. ಅಲ್ಲದೇ, ಆದಷ್ಟು ಬೇಗೆನೆ ಈ ಕೃತ್ಯಗೈದಿರುವ ದುಷ್ಕರ್ಮಿಗಳನ್ನು ಬಂಧಿಸುವ ಭರವಸೆ ಪೊಲೀಸರು ನೀಡಿದರು.
ಬೆಳಗಾವಿಯ ಘಟನೆ ಇನ್ನೂ ಹಚ್ಚ ಹಸಿರಿರುವಾಗಲೇ ಮತ್ತೆ ಈ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಅಗೌರವ ತೋರಿಸಿರುವ ಹಿನ್ನೆಲೆಯನ್ನ ತಿಳಿದುಕೊಳ್ಳುವ ಅವಶ್ಯಕತೆ. ಯಾಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು.
ಗ್ರಾಮದಲ್ಲಿ ಪೊಲೀಸರ ಮಧ್ಯಸ್ತಿಕೆಯಿಂದ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸರು ಎಷ್ಟು ಬೇಗ ಆರೋಪಿಗಳನ್ನ ಪತ್ತೆ ಹಚ್ಚುತ್ತಾರೆಂಬುದರ ಮೇಲೆ ಮುಂದಿನ ಸ್ಥಿತಿ ನಿರ್ಧಾರವಾಗಲಿದೆ.