ಬೆಂಗಳೂರು ಮೂಲದ ಮರಳು ತುಂಬಿದ ಲಾರಿಗಳು ವಶ… ಸೆಟ್ಟಿಂಗ್ ಆಗದ ಪೊಲೀಸರು: ಮುರುಗೇಶ, ತೌಸೀಫ, ಅಬ್ಬು ಅಂದರ್ ಯಾವಾಗ..!

ಧಾರವಾಡ: ನಗರದಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದೆ ಅದರ ಹಿಂದೆ ಕೆಲವರಿದ್ದಾರೆ ಎಂದು ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ನೀಡಿದ ಒಂದೇ ಗಂಟೆಯಲ್ಲಿ ಬೆಂಗಳೂರು ಮೂಲದ ಎರಡು ಮರಳು ತುಂಬಿದ ಲಾರಿಗಳನ್ನ ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಧಾರವಾಡದ ಎಪಿಎಂಸಿ ಯಾರ್ಡನಲ್ಲಿ ದಂಧೆ ನಡೆಸುತ್ತಿರುವ ಮುರುಗೇಶ ಹೊನಕೇರಿ, ಅಬ್ಬು ಅಲಿಯಾಸ್ ಅಬ್ದುಲ ಬಂಕಾಪುರ ಹಾಗೂ ತೌಸೀಫ ಯರಗಟ್ಟಿಯವರ ಸುಪರ್ಧಿಗೆ ಬಂದು ಬೀಳಬೇಕಾಗಿದ್ದ ಮರಳನ್ನ ಲಾರಿಗಳ ಸಮೇತ ವಶಕ್ಕೆ ಪಡೆಯುವಲ್ಲಿ ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆಎ-33 ಎ-7860 ಹಾಗೂ ಮತ್ತೊಂದು ಹದಿನಾರು ಗಾಲಿಯ ಲಾರಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಮರಳು ಮತ್ತು ಜಲ್ಲಿಯನ್ನ ತೆಗೆದುಕೊಂಡು ಅಡ್ಡೆಯಲ್ಲಿ ಡಂಪ್ ಮಾಡುವಾಗ ರೇಡ್ ಆಗಿದೆ. ಸುಮಾರು ಎರಡೂವರೆ ಲಕ್ಷ ಮೌಲ್ಯದ ಮರಳು ಹಾಗೂ ಎರಡು ಲಾರಿಗಳನ್ನ ವಶಕ್ಕೆ ಪಡೆಯಲಾಗಿದೆ.
ಮಹೇಶಗೌಡ ನಾಯಕ ನೇತೃತ್ವದಲ್ಲಿ ನಡೆದ ದಾಳಿಯ ನಂತರ ವಾಹನವನ್ನ ತೆಗೆದುಕೊಂಡು ಪೊಲೀಸ್ ಠಾಣೆಗೆ ಬರುವಂತೆ ಸೂಚನೆ ನೀಡಿದರೂ ಕೂಡಾ, ನೀವೇ ಕ್ರೇನ್ ತೆಗೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾರಂತೆ. ಹೀಗಾಗಿ ಲಾರಿಗಳನ್ನ ಎಳೆದೊಯ್ಯಲು ವ್ಯವಸ್ಥೆಯನ್ನ ಮಾಡಲಾಗುತ್ತಿದೆ.
ಶಾಸಕರ ಹೆಸರಿನಲ್ಲಿ ಅವರಿಗೂ ಗೊತ್ತಿಲ್ಲದ ಹಾಗೇ ಮರಳು ದಂಧೆಯಲ್ಲಿ ತೊಡಗಿರುವ ಮುರುಗೇಶ ಹೊನಕೇರಿ, ಅಬ್ದುಲ ಬಂಕಾಪುರ ಹಾಗೂ ತೌಸೀಫ ಯರಗಟ್ಟಿಯವರ ಮೇಲೆ ಪೊಲೀಸರು ಕ್ರಮವನ್ನ ಜರುಗಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.