ಅಕ್ರಮ ಮರಳು ದಂಧೆ: ಪೊಲೀಸರ ವಿರುದ್ಧವೇ ಪ್ರತಿಭಟನೆಗೀಳಿದ ‘ಉಸುಕಿ’ನ ಜನ
1 min readಹುಬ್ಬಳ್ಳಿ: ಅವಳಿನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ದಂಧೆಯನ್ನ ಹತ್ತಿಕ್ಕಲು ನಿನ್ನೆ ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ ಡಿಸಿಪಿ ರಾಮರಾಜನ್ ಕ್ರಮವನ್ನ ಖಂಡಿಸಿ, ಮರಳು ಮಾರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಬೈಪಾಸ್ ಬಳಿ ಸೇರಿದಂತೆ ಕಸಬಾಪೇಟೆ ಠಾಣೆ ವ್ಯಾಫ್ತಿಯಲ್ಲಿ ಒಂಬತ್ತು ಲಾರಿಗಳನ್ನ ತಪಾಸಣೆ ಮಾಡಿದ್ದ ಡಿಸಿಪಿ ರಾಮರಾಜನ್, ಅವುಗಳೆಲ್ಲವನ್ನೂ ಗಣಿ ಭೂ ವಿಜ್ಞಾನ ಇಲಾಖೆಗೊಪ್ಪಿಸಿ ಕಾನೂನು ಕ್ರಮವನ್ನ ಜರುಗಿಸುವಂತೆ ಹೇಳಿದ್ದರು.
ಇದರಿಂದ ರೋಸಿ ಹೋಗಿರುವ ಲಾರಿ ಮಾಲೀಕರು, ಇಂದು ಬೈಪಾಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇರೆ ಜಿಲ್ಲೆಯಿಂದ ಮರಳು ತರಲು ಸಮಯದ ಅಭಾವವಿರುತ್ತದೆ ಇದರಿಂದ ಹಲವು ಸಮಸ್ಯೆಗಳಾಗುತ್ತಿವೆ ಎಂದು ದೂರುತ್ತಿದ್ದಾರೆ.
ರೇಡ್ ಮಾಡುವ ಮುನ್ನ ನಂಜೊತೆ ಮಾತುಕತೆ ಮಾಡಬೇಕಿತ್ತು. ಕಾನೂನು ಬಾಹಿರ ಚಟುವಟಿಕೆ ಮಾಡಲು ನಮಗೂ ಇಷ್ಟವಿಲ್ಲ. ಆದರೆ, ಏಕಾಏಕಿ ದಾಳಿ ಮಾಡಿದರೇ ನಮಗೂ ತೊಂದರೆಯಾಗುತ್ತದೆ ಎಂದು ಹೇಳಿದ ಮರಳು ಮಾರಾಟಗಾರರು ಮತ್ತು ಲಾರಿ ಮಾಲೀಕರು, ತಕ್ಷಣವೇ ಅಧಿಕಾರಿಗಳು ಮಾತನಾಡಲು ಮುಂದಾಗಬೇಕೆಂದು ಆಗ್ರಹಿಸಿದರು.