ಧಾರವಾಡ-ಸರಕಾರಿ ಜಾಗದಲ್ಲೇ ಶ್ರೀಗಂಧ ಮರ ಮಾಯ..! ಹೊಣೆಗಾರರು ಯಾರೂ.. !
ಧಾರವಾಡ: ಸರಕಾರದ ಅಧೀನದಲ್ಲಿದ್ದು, ಸದಾಕಾಲ ಕಾವಲಿರುವ ಪ್ರದೇಶದಲ್ಲಿಯೇ 8 ಶ್ರೀಗಂಧದ ಮರಗಳನ್ನ ಕಡಿದುಕೊಂಡು ಹೋಗಲಾಗಿದ್ದು, ಯಾರಿಗೂ ತಿಳಿಯದೇ ಇರುವುದು ಸೋಜಿಗ ಮೂಡಿಸಿದೆ.
ಧಾರವಾಡದ ರಾಯಾಪೂರ ಬಳಿಯಿರುವ ಸಂಜೀವಿನಿ ಪಾರ್ಕನಲ್ಲಿ 7 ಮರ ಹಾಗೂ ಗುಂಗರಗಟ್ಟಿ ಪ್ರದೇಶದಲ್ಲಿ ಒಂದು ಮರವನ್ನ ಕಡಿದುಕೊಂಡು ಹೋಗಲಾಗಿದೆ. ಎರಡ್ಮೂರು ಅಡಿ ಸುತ್ತಳತೆಯ ಮರಗಳನ್ನೇ ಟಾರ್ಗೆಟ್ ಮಾಡಲಾಗಿದ್ದು, ಮೊದಲೇ ಅವುಗಳನ್ನ ಗುರುತಿಸಿ ಕಡಿದುಕೊಂಡು ಪರಾರಿಯಾಗಿರುವ ಬಗ್ಗೆ ಇದೀಗ ಅಧಿಕಾರಿಗಳಿಗೆ ಗೊತ್ತಾಗಿದೆ. ಹಾಗಾಗಿಯೇ, ಎರಡು ಪ್ರದೇಶಗಳ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಹೇಳಿದ್ದಾರೆ.
ಸಂಜೀವಿನಿ ಗಾರ್ಡನ್ ಮತ್ತು ಗುಂಗರಗಟ್ಟಿ ಪ್ರದೇಶ ಅರಣ್ಯ ಇಲಾಖೆಯ ಸುಪರ್ಧಿಯಲ್ಲಿದ್ದು, ಬಹುತೇಕ ಸಮಯದಲ್ಲಿ ನಿಗಾ ವಹಿಸಿರಲಾಗತ್ತೆ. ಆದರೂ, ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರಗಳನ್ನ ಕಳ್ಳತನ ಮಾಡಿರುವುದು ಹಲವು ರೀತಿಯಲ್ಲಿ ಸಂಶಯ ಮೂಡಿಸಿದೆ.