ಸೈನಿಕನ ಕರುಳಿನ ಕೂಗಿಗೆ “ಬಚಾವಾದ 7 Star ಸುಲ್ತಾನಾ”…
1 min readಖುರ್ಬಾನಿಗೆ ತಂದ ಟಗರು ಮಾಲೀಕನಿಗೆ ಬಾಚಿಕೊಟ್ಟಿದ್ದು ಲಕ್ಷ… ಲಕ್ಷ..!
ಯೋಧನ ಧ್ವನಿಗೆ ಉಳಿಯಿತು ಟಗರಿನ ಜೀವ..
ಹವಾ ಸೃಷ್ಟಿಸಿ ಸಾವಿನ ದವಡೆಯಿಂದ ಪಾರಾದ 7 ಸ್ಟಾರ್ ಸುಲ್ತಾನ
ಬಾಗಲಕೋಟೆ: ಅವ್ನು ಕಾಳಗಕ್ಕೆ ನಿಂತರೆ ಎದುರಾಳಿಗಳನ್ನು ಮಣಿಸಬಲ್ಲ, ಕನ್ನಡದ ಚಿತ್ರದಲ್ಲೂ ಅಭಿನಯಿಸಿ ತನ್ನ ತಾಕತ್ತು ಪ್ರದರ್ಶಿಸಿದ. ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟçದಲ್ಲೂ ಅವನಿಗೆ ಅಭಿಮಾನಿಗಳು ಇದ್ದಾರೆ…!
ಆದರೆ ಬರುವ ಬಕ್ರೀದ್‌ಗೆ ಆತ ಬಲಿಯಾಗುತ್ತಾನೆ ಎಂಬುದಷ್ಟೇ ಬೇಸರದ ವಿಚಾರ ಆತನಿಗಾಗಿ ಜನ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದರು. ಆತನ ಮಾಲೀಕರ ಮನಸ್ಸೂ ಬದಲಿಸಿದರು. ಬದುಕಿತೆ ಬಡ ಜೀವ ಎಂಬಂತ ಅದರ ಪರವಾಗಿ ಧ್ವನಿ ಎತ್ತಿದವರೆಲ್ಲ ನಿಟ್ಟುಸಿರು ಬಿಟ್ಟರು. ಟಗರಿನ ಕಾಳಗಳಲ್ಲಿ ಭಾರೀ ಹವಾ ಮಾಡುತ್ತಿರುವ ತಾಲೂಕಿನ ಸುತಗುಂಡಾರ ಗ್ರಾಮದ ೭ ಸ್ಟಾರ್ ಸುಲ್ತಾನ್‌ನ ಜೀವನಗಾಥೆಯಿದು. ಈ ಟಗರು ಖರೀದಿಸಿದ ಮಾಲೀಕ, ಅದಕ್ಕಾಗಿ ಧ್ವನಿ ಎತ್ತಿದ ಯೋಧ.
ಏನು.. ಎತ್ತ… ಇಲ್ಲಿದೆ ನೋಡಿ ಸಂಪೂರ್ಣ ವೀಡಿಯೋ…
ರಾತೋರಾತ್ರಿ ಈ ಟಗರು ಸೃಷ್ಟಿಸಿದ ಹವಾ ನೋಡಿದರೆ ಇದು ಮತ್ತೊಂದು ಚಿತ್ರಕಥೆಗೆ ಸ್ಫೂರ್ತಿಯಾಗದೆ ಇರಲಾರದು.
ಬಕ್ರೀದ್‌ಗೆ ಕುರಬಾನಿ ನೀಡುವ ಸಂಪ್ರದಾಯ ಮುಸ್ಲಿಂ ಧರ್ಮದಲ್ಲಿದೆ ಅದಕ್ಕಾಗಿಯೇ ಸುತಗುಂಡಾರ ಗ್ರಾಮದ ಮೊಹಮ್ಮದ್ ಯೂನುಸ್ ಗಡೇದ ಅವರು ರಾಂಪೂರ ಗ್ರಾಮದ ಬಸು ಎಂಬುವವರಿಂದ ಕುರುಬಾನಿ(ಬಲಿ)ಗಾಗಿ ೧.೮೮ ಲಕ್ಷ ರೂ.ಗಳಿಗೆ ಖರೀದಿಸಿದ್ದರು. ಆದರೆ ಟಗರಿನ ಕಾಳಗವೊಂದರಲ್ಲಿ ಅದನ್ನು ಬಿಟ್ಟು ನೋಡುವ ಪ್ರಯೋಗ ಮಾಡಿದ್ದಾಗ ಅದು ಅಚ್ಚರಿ ಎಂಬಂತೆ ಗೆಲುವು ಸಾಧಿಸಿತು. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟçದ ಕಾಳಗಳಲ್ಲೂ ಸುಲ್ತಾನ ತನ್ನ ತಾಕತ್ತು ಪ್ರದರ್ಶಿಸಿದ್ದು, ಅದರ ಫಲವಾಗಿ ೨೦ ಲಕ್ಷ ರೂ.ಗಳವರೆಗೆ ನಗದು, ಚಿನ್ನ, ಬೆಳ್ಳಿಯನ್ನು ತನ್ನ ಮಾಲೀಕನಿಗೆ ಬಾಚಿಕೊಟ್ಟಿದೆ.
ಇಲ್ಲಿಯವರೆಗೆ ೩೪ ಕಣದಲ್ಲಿ ಭಾಗವಹಿಸಿರುವ ಈ ಟಗರು ಅಷ್ಟೂ ಕಣದಲ್ಲಿ ಪ್ರಥಮ ಸ್ಥಾನಗಳಿಸಿದೆ ಎಂದು ಮಾಲೀಕ ಮೊಹಮ್ಮದ್ ಹೇಳುತ್ತಿದ್ದು, ೨೦ ಲಕ್ಷಕ್ಕೂ ಅಧಿಕ ನಗದು ಬಹುಮಾನ, ಒಂದು ಬುಲೆಟ್ ಬೈಕ್, ಒಂದು ಎಚ್‌ಎಫ್ ಡಿಲಕ್ಸ್, ೧ ಎಚ್‌ಎಫ್ ೧೦೦, ಒಂದೂವರೆ ತೊಲೆ ಚಿನ್ನವನ್ನು ಗೆದ್ದಿದೆ.
ಈ ಟಗರು ಹರಕೆ ತೀರಿಸಲು ತಂದಿದ್ದರಿAದ ಈ ಬಾರಿ ಬಕ್ರೀದ್‌ಗೆ ಕುರುಬಾನಿ ನೀಡಲು ಮುಂದಾಗಿದ್ದರು. ಆದರೆ ರೀಲ್ಸ್ ಮೂಲಕ ಮನೆಮಾತಾಗಿರುವ ಈ ಭಾಗದ ಬಿಎಸ್‌ಎಫ್ ಯೋಧ ಸಂತೋಷ ಬಾವಿಕಟ್ಟಿ ಅವರು ೭ಸ್ಟಾರ್ ಸುಲ್ತಾನನ ಕಥೆಯನ್ನು ತಮ್ಮ ರೀಲ್ಸ್ ಮೂಲಕ ಮನಕಲಕುವಂತೆ ಹೇಳಿ ಬೇಸರ ವ್ಯಕ್ತಪಡಿಸಿದ್ದರು. ಅದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸುಲ್ತಾನನನ್ನು ಬಲಿಕೊಡದಂತೆ ಧ್ವನಿ ಜೋರಾಯಿತು. ಮುಖ್ಯ ಸ್ತರದ ಮಾಧ್ಯಮಗಳು ಈ ವಿಚಾರದ ಮೇಲೆ ಬೆಳಕು ಚೆಲ್ಲಿದವು. ಇದರಿಂದ ಮನಸ್ಸು ಬದಲಿಸಿರುವ ಮೊಹಮ್ಮದ್ ಯೂನುಸ್ ಗಡೇದ ಬಲಿ ಕೊಡದೆ ಮುಂದೆಯೇ ಅದನ್ನು ಟಗರಿನ ಕಾಳಗಗಳಲ್ಲಿ ಭಾಗವಹಿಸುವಂತೆ ಮಾಡುವುದಾಗಿ ಘೋಷಿಸಿದ್ದಾರೆ. ಈ ೭ಸ್ಟಾರ್ ಸುಲ್ತಾನ ಡಾಲಿ ಧನಂಜಯ ಅಭಿನಯದ ಟಗರು ಪಲ್ಯ ಚಿತ್ರದಲ್ಲೂ ಅಭಿನಯಿಸಿದ್ದು. ಈಗ ಅದು ಸಾವಿನ ದವಡೆಯಿಂದ ಪಾರಾಗಿದೆ. ಈ ರೋಚಕ ಕಥೆಯೇ ಮತ್ತೊಂದು ಚಿತ್ರವಾಗುವ ಎಲ್ಲ ಲಕ್ಷಣವನ್ನು ಹೊಂದಿದೆ.
ಸುಲ್ತಾನ ಟಗರು ಕುರಬಾನಿ ನೀಡುವ ನಿರ್ಧಾರ ಕೈ ಬಿಟ್ಟಿದ್ದೇವೆ. ಮುಂದಿನ ಕಾಳಗಗಳಲ್ಲಿ ಆತನ ಆಟ ಎಂದಿನಂತೆ ಇರುತ್ತದೆ.
_ ಮೊಹಮ್ಮದ್ ಯೂನುಸ್ ಗಡೇದ, ಟಗರಿನ ಮಾಲೀಕ