Posts Slider

Karnataka Voice

Latest Kannada News

ಅವನ ಅವಳಾಗುವ ಚಟ: ಯುವತಿಯರು ಕಂಗಾಲು- ಪುರುಷರು ಸೇಫ್: Exclusive video

1 min read
Spread the love

ಉತ್ತರಕನ್ನಡ: ಸಂಜೆ ಬಟ್ಟೆ ತೊಳೆದು ಒಣಗಲು ಹಾಕಿದ್ದ ಮಹಿಳೆಯರ ಬಟ್ಟೆಗಳು ಬೆಳಗಾಗುವುದರೊಳಗಾಗಿ ಮಾಯವಾಗುತ್ತಿದ್ದವು. ಪುರುಷರ ಬಟ್ಟೆಗಳನ್ನ ಬಿಟ್ಟು ಹೋಗುತ್ತಿದ್ದು ಏಕೆ ಎಂದು ಎಲ್ಲರೂ ಅಂದುಕೊಳ್ಳುವಾಗಲೇ, ಅದೋಬ್ಬರ ಮನೆಯ ಸಿಸಿಟಿವಿ ಸುಂದರಿಯೋರ್ವರು ಕಂಡು ಬಿಟ್ಟಿದ್ದಳು… ಹಾಗಾದ್ರೇ… ಅವಳು ಅವಳಾ… ಮುಂದೆ ಓದಿ..

ಆ ಮನೆಗಳಲ್ಲಿ ರಾತ್ರಿ ಬೆಳಗಾಗೊದ್ರೊಳಗೆ ಒಣಗಿಸಿದ್ದ ಹೆಣ್ಣುಮಕ್ಕಳ ಬಟ್ಟೆ, ಬಾಗಿಲ ಎದುರಿನ ಚಪ್ಪಲ್ಲಿಗಳು ನಾಪತ್ತೆಯಾಗುತ್ತಿದ್ದವು, ಎಲ್ಲೊಯ್ತು ಎಂದು ಗಡಿಬಿಡಿಯಲ್ಲಿ ಮನೆಯಲ್ಲಿರುವವರು ಸಿಸಿಟಿವಿ ನೋಡಿದ್ರೆ ಚೆಲುವೆಯೋರ್ವಳ ಕೈಚಳಕ ಕಣ್ಣಿಗೆ ಬಿದ್ದಿತ್ತು.
ಇನ್ನು ಸ್ವಲ್ಪ ಹೊತ್ತು ಕ್ಯಾಮರಾ ವೀಡಿಯೋ ಪರಿಶೀಲಿಸಿದ್ದ ಮನೆಯವರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸ್ಕರ್ಟ್ ಧರಿಸಿ ಬಂದವಳು ಚೆಲುವೆಯಲ್ಲ ಓರ್ವ ಸೈಕೋಪಾತ್ ಯುವಕ ಅನ್ನೋದು ಮನೆಯವರಿಗೆ ಗೋತ್ತಾಯಿತು.

ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ಉತ್ತರಕನ್ನಡ ಜಿಲ್ಲೆಯ ಕುಮಟ ಪಟ್ಟಣದ ಮಣಕಿ ಎಂಬಲ್ಲಿ. ರಾತ್ರಿಯಾಗುತ್ತಿದ್ದಂತೆ ಹೆಣ್ಣು ಮಕ್ಕಳ ಬಟ್ಟೆ ಧರಿಸಿ ಓಡಾಡುವ ಯುವಕ ಮನೆಯ ಅಂಗಳದಲ್ಲಿ ಒಣಗಿಸಲು ಹಾಕಿರೋ ಹೆಣ್ಣುಮಕ್ಕಳ, ಮಹಿಳೆಯರ ಬಟ್ಟೆಗಳನ್ನು ಕದ್ದೊಯ್ಯುತ್ತಿದ್ದ. ಆದರೆ ಕೆಲವರಿಗೆ ಬಟ್ಟೆ ಏನಾಯಿತು ಎಂಬುದೇ ಗೊತ್ತಾಗುತ್ತಿರಲಿಲ್ಲ. ಕೆಲ ದಿನಗಳ ಹಿಂದೆ ರಾಮಚಂದ್ರ ಹೆಗಡೆ ಎಂಬುವವರ ಮನೆಗೆ ಸ್ಕರ್ಟ್ ಧರಿಸಿ ಸುಮಾರು ರಾತ್ರಿ 2-13 ರ ಸುಮಾರು ಬಂದಿದ್ದ ಈತ ಮನೆ ಎದುರು ಒಣಗಿಸಿದ್ದ ಕೇವಲ ಹೆಣ್ಣುಮಕ್ಕಳ ಬಟ್ಟೆಗಳನ್ನು ಎಳೆದುಕೊಂಡು ಮೈಮೇಲೆ ಹಾಕಿಕೊಂಡಿದ್ದ. ಮನೆ ಬಾಗಿಲ ಬಳಿ ಇದ್ದ ಚಪ್ಪಲ್ಲಿಗಳನ್ನು ಎತ್ತಿಕೊಂಡಿದ್ದ ಈ ಸೈಕೋ ವಿಕೃತಿ ಯುವಕ ಹೆಣ್ಣುಮಕ್ಕಳ ಬಟ್ಟೆ ಕಳ್ಳತನ್ನ ಮಾಡೋದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಕೃತ ಯುವಕ ಹಗಲು ಸಮಯದಲ್ಲಿ ಯಾರ ಮನೆ‌ಕಡೆ ಹೆಣ್ಣಮಕ್ಕಳು ಜಾಸ್ತಿ ಇದ್ದಾರೆ ಅಂತಾ ನೋಡಿಕೊಂಡು ರಾತ್ರಿ ಸಮಯದಲ್ಲಿ ಅವರ‌ ಮನೆಗೆ ನುಗ್ಗಿ ಒಣಗಿಸಲು ಹಾಕಿರೋ ಬಟ್ಟೆಯನ್ನ ಕದ್ದು ಪರಾರಿಯಾಗಿದ್ದಾನೆ.
ಅವಳಲ್ಲದ ಅವನನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ. ಇಲ್ಲದಿದ್ದರೇ ಅವನು ಅವಳಾಗುವ ಆಟ ಮುಂದುವರೆಸುತ್ತಲೇ ಇರುತ್ತಾನೆ.


Spread the love

Leave a Reply

Your email address will not be published. Required fields are marked *