ಅತಿಥಿಗಳನ್ನ ನಡೆಸಿಕೊಳ್ಳುವುದು ಹೀಗಾ…? ಗೋಡೌನ್ ರೂಮ್ಗಳು ಹೇಗಿವೆ ಗೊತ್ತಾ…! ಅತಿಥಿ ದೇವೋಭವ…!
1 min read
ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲವೂ ಸರಿಯಿಲ್ಲ ಎನ್ನೋದಕ್ಕೆ ಸಾಕ್ಷಿ ಸಮೇತ ನಿಮ್ಮ ಮುಂದೆ ಕರ್ನಾಟಕ ವಾಯ್ಸ್ ಬಿಚ್ಚಿಡುತ್ತಿದೆ ನೋಡಿ. ಕನ್ನಡಿಗರನ್ನ ಕಾಪಾಡು ಎನ್ನುತ್ತಲೇ ಅದೇ ಕನ್ನಡಿಗರನ್ನ ಅದೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದರ ವರದಿ ಇದು.
ಹೌದು…. ಸಮ್ಮೇಳನದಲ್ಲಿ ಭಾಗಿಯಾಗಲು ದೂರ ದೂರಿಂದ ಬಂದವರ ಸ್ಥಿತಿ ಅಯೋಮಯ. ಕೊಟ್ಟ ರೂಮ್ಗಳು ಅದ್ಯಾರಿಗೆ ಪ್ರೀತಿಯೋ… ಕಸ-ಗಲೀಜು ಎಲ್ಲವೂ ತುಂಬಿದೆ. ಇನ್ನೂ ಮಲಗಲು ಕೊಡುತ್ತಿರುವ ಬೆಡ್ಗಳು ಅದ್ಯಾವ ಆಸ್ಪತ್ರೆಯಿಂದ ತಂದಿದ್ದಾರೋ ಗೊತ್ತಿಲ್ಲ. ಅಲ್ಲಲ್ಲಿ ಗಲೀಜಿನ ಗುರುತುಗಳು ಅವುಗಳನ್ನ ಆವರಿಸಿವೆ. ಇಂತಹ ವ್ಯವಸ್ಥೆ ಮಾಡುವ ಬದಲು ರೂಮ್ ಕೊಡದೇ ಇದ್ದಿದ್ದರೇ ಚೆನ್ನಾಗಿತ್ತೇನೋ…. ಜೈ ಕನ್ನಡ