ನೂರಾರೂ ಕೋಟಿ ಮೋಸ- ‘ಕೈಗೆ’ ಸಿಕ್ಕ ಸಾಧುನವರ ಪುತ್ರನ ಸ್ಥಿತಿ “ಅಯ್ಯೋಯ್ಯೋಮಯ”…

ಧಾರವಾಡ: ಕಿತ್ತೂರು ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕಿನ ನೂರಾರೂ ಗ್ರಾಹಕರು ಬ್ಯಾಂಕಿನಲ್ಲಿಟ್ಟಿದ್ದ ಡೆಪಾಸಿಟ್ ಹಣಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ಬಾಯಿ ಬಾಯಿ ಬಡಿದುಕೊಂಡು ಹಣ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಇಂತಹ ದೃಶ್ಯಗಳು ಬೈಲಹೊಂಗಲದಲ್ಲಿನ ನಿವಾಸದಲ್ಲಿ ಕಂಡು ಬಂದವು.
ಹೌದು… ಹಣಯಿಟ್ಟವರ ಗೋಳು ತೀರಾ ಬೇಸರ ಮೂಡಿಸುವ ಹಾಗಾಗಿದೆ. ಇಲ್ಲಿದೆ ನೋಡಿ ವೀಡಿಯೋ…
ಡಾ.ವಿರುಪಾಕ್ಷ ಸಾಧುನವರ ಎಂಬುವವರು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಹರಿಬಿಟ್ಟಿರುವ ನೊಂದವರು, ತಾವೂ ಹೂಡಿರುವ ಬಂಡವಾಳ ಮರಳಿ ಪಡೆಯಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಣ ಪಡೆದು ತಲೆಮರೆಸಿಕೊಂಡಿರುವ ಬ್ಯಾಂಕಿನವರ ಮಕ್ಕಳು ಗ್ರಾಹಕರ ಬಳಿ ಸಿಕ್ಕಿದ್ದು, ಅವರನ್ನ ಬೇಡಿಕೊಳ್ಳುವ ಸ್ಥಿತಿಗೆ ಮಹಿಳೆಯರು ಬಂದಿದ್ದಾರೆ.