ಗಂಡ-ಹೆಂಡತಿ ಜಗಳ ಉಂಡೂ… ಆಗಿರಲಿಲ್ಲ: ಸಾಧನಾ ಸಾಂತ್ವನ ಸಂಸ್ಥೆ ಮಾಡಿದ್ದೇನು..
ಧಾರವಾಡ: ವಾಣಿಜ್ಯನಗರಿ ಹುಬ್ಬಳ್ಳಿಯ ಆಕೆಗೆ ಪತಿಯ ಹಿಂಸೆ ಸಾಕಾಗಿತ್ತು. ಗಂಡನ ಕಿರುಕುಳದೊಂದಿಗೆ ಬದುಕಲು ಮುಂದಾದರೂ, ಆತ ಸುಮ್ಮನೆ ಕೂಡದಾದಾಗ ಮಕ್ಕಳ ಜೊತೆಗೆ ತವರು ಮನೆ ಸೇರಿದ್ದಳಾದರೂ, ಗಂಡನ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಅದನ್ನರಿತು ಕಾರ್ಯನಿರ್ವಹಿಸಿ ಇಬ್ಬರನ್ನೂ ಒಂದು ಮಾಡಿದ್ದು ಧಾರವಾಡದ ಸಾಧನಾ ಸಾಂತ್ವನ ಕೇಂದ್ರ.
ಹೌದು.. ಹುಬ್ಬಳ್ಳಿಯ ಸಿದ್ಧರಾಮವ್ವ, ಸವದತ್ತಿಯ ಬಸವರಾಜನೊಂದಿಗೆ ವಿವಾಹವಾಗಿದ್ದರು. ಸುಖ ಸಂಸಾರವಾಗಿಯೇ ಮುನ್ನಡೆದಿತ್ತು. ಆದರೆ, ಕೆಲವು ತಿಂಗಳ ಹಿಂದೆ ಪತಿ ಬಸವರಾಜ ಹಲವು ರೀತಿಯ ತೊಂದರೆ ಕೊಡಲು ಮುಂದಾದ, ಹಾಗಾಗಿಯೇ ಸಿದ್ಧರಾಮವ್ವ ತವರು ಮನೆಗೆ ಮರಳಿದ್ದಳು.
ಗಂಡನ ಬಿಟ್ಟಿದ್ದರೂ ಸರಿಯಿರಲ್ಲ ಎಂದುಕೊಂಡು ಸಾಧನಾ ಸಾಂತ್ವನ ಕೇಂದ್ರ ಇಸ್ ಬೆಲ್ಲಾ ದಾಸ ಅವರ ಬಳಿ ತಮ್ಮ ನೋವನ್ನ ತೋಡಿಕೊಂಡಳು. ಮಹಿಳೆಯ ನೋವಿಗೆ ತಕ್ಷಣವೇ ಸ್ಪಂಧಿಸಿದ ಇಸಬೆಲ್ಲಾ ದಾಸ್, ಸವದತ್ತಿ ಪೊಲೀಸ್ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿಯವರ ಸಹಾಯ ಪಡೆದು, ಸತಿ-ಪತಿಯನ್ನ ಒಂದು ಮಾಡಿದ್ದಾರೆ.
ಇಬ್ಬರು ಮುಂದೆ ಚೆನ್ನಾಗಿ ಬದುಕುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಮಕ್ಕಳ ಸಮೇತ ಸಿದ್ಧರಾಮವ್ವ ಮತ್ತು ಬಸವರಾಜ ಹೊರಟು ನಿಂತಾಗ, ಸಾಧನಾ ಸಾಂತ್ವನ ಕೇಂದ್ರದ ಇಸಬೆಲ್ಲಾ ದಾಸ, ನೆಮ್ಮದಿಯ ನಿಟ್ಟುಸಿರು ಬಿಟ್ಟರು.